ಬೆಂಗಳೂರು: ಚಂದ್ರಯಾನ –2 ಯೋಜನೆಯ ವೈಫಲ್ಯದ ಕುಂದು ಕೊರತೆಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಚಂದ್ರ ದಕ್ಷಿಣ ಧ್ರುವಕ್ಕೆ ಲಗ್ಗೆ ಇಡಲು ಇಸ್ರೋ ಸಿದ್ಧತೆ ನಡೆಸಿದ್ದು, ಚಂದ್ರಯಾನ –3 ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇದು ಚಂದ್ರಯಾನ –2 ಯೋಜನೆಯಂತೆಯೇ ಲ್ಯಾಂಡರ್ , ರೋವರ್ ಮತ್ತು ಪ್ರೊಪಲ್ಷನ್ ಅನ್ನು ಒಳಗೊಂಡಿದೆ. ಚಂದ್ರಯಾನ –2 ಯೋಜನೆಯ ಆರ್ಬಿಟ್ ಇನ್ನೂ ಚಂದ್ರನ ಕಕ್ಷೆಯಲ್ಲಿ ಸಕ್ರಿಯವಾಗಿರುವುದರಿಂದ ಹೊಸ ಯೋಜನೆಯಲ್ಲಿ ಮತ್ತೊಮ್ಮೆ ಆರ್ಬಿಟ್ ಉಡಾವಣೆ ಮಾಡುವುದಿಲ್ಲ. ಉಡಾವಣಾ ವಾಹಕ ಕೇವಲ ಲ್ಯಾಂಡರ್ ಮತ್ತು ರೋವರ್ ಅನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದ್ದಾರೆ.
ಚಂದ್ರಯಾನ –3ಗೆ ಕೇಂದ್ರದ ಅನುಮೋದನೆ
Follow Us