ಬೆಂಗಳೂರು: ಇದೇ ತಿಂಗಳ 29ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ.
ಹೈಕಮಾಂಡ್ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆರ್ಎಸ್ಎಸ್ ಮುಖಂಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದ್ದಾರೆ.
ಹೈಕಮಾಂಡ್ನಿಂದ ಸಂದೇಶ ಬಂದ ಬಳಿಕ ಜ್ಯೋತಿಷಿಗಳ ಸಲಹೆಯನ್ನು ಮುಖ್ಯಮಂತ್ರಿ ಪಡೆದಿದ್ದಾರೆ. ಜ.29ರಂದು ಸಂಪುಟ ವಿಸ್ತರಣೆ ಮಾಡಲು ಯಾವುದೇ ತೊಂದರೆ ಇಲ್ಲ. ಸಂಪುಟ ವಿಸ್ತರಣೆ ಮಾಡಲು ಇದು ಸೂಕ್ತ ಸಮಯ ಎಂದು ಜ್ಯೋತಿಷಿಗಳೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಪಾಲರ ಸಮಯ ಕೇಳಲು ನಿರ್ಧರಿಸಿದ್ದಾರೆ.
ಜ.29ರಂದು ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸೂಚನೆ
Follow Us