ನವದೆಹಲಿ: ನಾನು ಸದಾ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಬೆವರು ಹರಿಸುತ್ತೇನೆ. ಇದು ತನ್ನ ಚರ್ಮದ ಹೊಳಪಿಗೆ ಕಾರಣ ಎಂದು ನಾನು ಅವರಿಗೆ ಉತ್ತರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗಣತಂತ್ರ ದಿನೋತ್ಸವ ಅಂಗವಾಗಿ “ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ೨೦೨೦” ಪ್ರದಾನ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದಾಗ ವಿದ್ಯಾರ್ಥಿಯೊಬ್ಬರು, ನಿಮ್ಮ ಮುಖದ ಕಾಂತಿಯ ರಹಸ್ಯವೇನು ಎಂದು ಪ್ರಶ್ನಿಸಿದರು. ಆಗ ಮೋದಿ ಈ ಉತ್ತರ ನೀಡಿದ್ದಾರೆ.
ವಿದ್ಯಾರ್ಥಿಗಳು ಸದಾ ಕಷ್ಟಪಟ್ಟು ಕೆಲಸ ಮಾಡಬೇಕು. ದಿನಕ್ಕೆ ನಾಲ್ಕು ಬಾರಿ ಬೆವರು ಹರಿಸುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ನಾನು ಬೆವರು ಹರಿಸಿದ್ದೇ ಚರ್ಮದ ಹೊಳಪಿಗೆ ಕಾರಣ- ಮೋದಿ
Follow Us