ನವದೆಹಲಿ: ಫೆ. 1ಕ್ಕೆ ನಿಗದಿಯಾಗಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲುಶಿಕ್ಷೆಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮತ್ತೆ ಮುಂದೂಡಿದೆ. ಹೊಸ ಆದೇಶ ಹೊರಬೀಳುವವರೆಗೂ ಗಲ್ಲುಶಿಕ್ಷೆ ನಡೆಸದಂತೆ ತಿಳಿಸಿದೆ.
ದೆಹಲಿಯ ಪಟಿಯಾಲ ಕೊರ್ಟ್ನ ಅಡಿಷನಲ್ ಸೆಸನ್ಸ್ ಜಡ್ಜ್ ಧರ್ಮೆಂದ್ರ ರಾಣ ಅವರು ಶುಕ್ರವಾರ ತೀರ್ಪು ಪ್ರಕಟಿಸಿದರು.
ವಕೀಲ ಎ.ಪಿ.ಸಿಂಗ್ ಅಪರಾಧಿಗಳಾದ ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮ ಮತ್ತು ಅಕ್ಷಯ್ ಕುಮಾರ್ ಪರ ನ್ಯಾಯಾಕಯಕ್ಕೆ ಅರ್ಜಿ ಸಲ್ಲಿಸಿ ಫೆ.1ರ ಗಲ್ಲುಶಿಕ್ಷೆಗೆ ತಡೆಕೋರಿದ್ದರು.
ಈ ಹಿಂದೆ ಜನವರಿ 22ಕ್ಕೆ ಅಪರಾಧಿಗಳ ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿತ್ತು. ಆದರೆ, ಅಪರಾಧಿಗಳ ಕಾನೂನು ಪ್ರಕ್ರಿಯೆ ಮುಗಿಯದ ಕಾರಣದಿಂದಾಗಿ ಫೆ. 1ಕ್ಕೆ ಮುಂದೂಡಲಾಗಿತ್ತು.
ನಿರ್ಭಯಾ ಅಪರಾಧಿಗಳಿಗೆ ನಾಳೆಯ ಗಲ್ಲು ಶಿಕ್ಷೆ ಮುಂದೂಡಿಕೆ
Follow Us