ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯ ದಿನ (ಫೆ.1) ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ತಿಹಾರ್ ಜೈಲಿನ ಅಧಿಕಾರಿಗಳು ದಯಾ ಅರ್ಜಿ ಸಲ್ಕಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಪಟಿಯಾಲ ಹೌಸ್ ಕೋರ್ಟ್ ಮೆಟ್ಟಿಲೇರಿದ್ದು, ನಾಳೆ (ಜ.25) ವಿಚಾರಣೆಗೆ ಬರಲಿದೆ.
ಅಪರಾಧಿಗಳಾದ ಪವನ್ ಮತ್ತು ಅಕ್ಷಯ್ ಪರವಾಗಿ ಕ್ಯುರೇಟಿವ್ ಮತ್ತು ದಯಾ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ನೀಡಲು ತಿಹಾರ್ ಜೈಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ವಕೀಲ ಎ.ಪಿ. ಸಿಂಗ್ ಆರೋಪಿಸಿದ್ದಾರೆ.
ಇನ್ನುಳಿದ ಇಬ್ಬರು ಅಫರಾಧಿಗಳಾದ ವಿನಯ್ ಕುಮಾರ್ ಶರ್ಮಾ ಮತ್ತು ಮುಕೇಶ್ ಸಿಂಗ್ ಅವರ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಈಗಾಗಲೇ ತಿರಸ್ಕರಿಸಿದೆ.
ಈ ಮಧ್ಯೆ, ಕೇಂದ್ರ ಸರ್ಕಾರವು ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಏಳು ದಿನಗಳ ಗಡುವು ಹಾಗೂ ಮರಣದಂಡನೆ ನಿಗದಿಪಡಿಸಿದ ಏಳು ದಿನಗಳಲ್ಲಿ ದಯಾ ಅರ್ಜಿ ಸಲ್ಲಿಸಲು ಸೂಚಿಸಬೇಕು ಎಂದು ಕೇಳಿಕೊಂಡಿತ್ತು.
ನಿರ್ಭಯಾ ಕೇಸ್: ಮತ್ತೆ ಕೋರ್ಟ್ ಮೆಟ್ಟಿಲೇರಿದ ಅಪರಾಧಿಗಳ ಪರ ವಕೀಲ
Follow Us