ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ನೇಣಿಗೆ ಏರಿಸಲು ದೆಹಲಿ ನ್ಯಾಯಾಲಯ ಮುಹೂರ್ತ ನಿಗದಿಪಡಿಸಿದೆ.
2012ರಲ್ಲಿ ದೆಹಲಿಯ ಚಲಿಸುತ್ತಿದ್ದ ಬಸ್ ಒಂದರಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರ ಎಸಗಿ, ಬರ್ಬರವಾಗಿ ಹತ್ಯೆ ಮಾಡಿದ ಈ ಅಪರಾಧಿಗಳನ್ನು ಜ.22ರಂದು ಬೆಳಗ್ಗೆ 7ಕ್ಕೆ ನೇಣಿಗೇರಿಸಲು ನ್ಯಾಯಪೀಠ ಆದೇಶಿಸಿದೆ. ಈಗಾಗಲೇ ಸುಪ್ರೀಂಕೋರ್ಟ್ ಇವರ ಮರಣದಂಡನೆಯ ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಈ ಸಂಬಂಧ ಪದೇ ಪದೇ ವಿಚಾರಣೆ ನಡೆಸುವುದಿಲ್ಲವೆಂದು ಸ್ಪಷ್ಟಪಡಿಸಿತ್ತು.