ಮೈಸೂರು: ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳಿಗೆ ನಕ್ಸಲ್ ನಂಟು ಹೊಂದಿದ್ದಾಳೆಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಆಕೆಯ ಹಿಂದಿರುವ ಕೈಗಳನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುವುದು ಎಂದು ಬಿಎಸ್ ವೈ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಅಮುಲ್ಯ ತಂದೆಯೇ ಆಕೆಯ ಕೈ ಕಾಲು ಮುರಿಯಿರಿ, ಆಕೆಗೆ ಜಾಮೀನು ಸಿಗಬಾರದು. ಮಗಳ ರಕ್ಷಣೆಗೆ ಹೋಗಲ್ಲ ಎಂದಿದ್ದಾರೆ. ಅಲ್ಲದೆ ಆಕೆ ಹಿಂದೆ ವ್ಯವಸ್ಥಿತ ಸಂಘಟನೆ ಇದೆ ಎನ್ನಲಾಗಿದೆ. ಶೀಘ್ರವೇ ಆಕೆ ಹಿಂದಿರುವ ಕೈಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಇಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಘಟನೆಗಳ ಹಿಂದೆ ಇರುವ ಸಂಘಟನೆಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳದಿದ್ದಲ್ಲಿ ಅವರ ದೇಶ ವಿರೋಧಿ ಕೆಲಸಗಳಿಗೆ ಕೊನೆ ಇರುವುದಿಲ್ಲ ಎಂದು ಕಿಡಿಕಾರಿದರು.
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳಿಗೆ ನಕ್ಸಲ್ ನಂಟು: ಸಿಎಂ
Follow Us