Thursday, January 21, 2021

ಪೌರತ್ವ ತಿದ್ದುಪಡಿ ಮಸೂದೆ: ನಾಳೆ ರಾಜ್ಯ ಸಭೆಯಲ್ಲಿ ಮಂಡನೆ

ನವದೆಹಲಿ: ಬಹು ಚರ್ಚಿತ ಪೌರತ್ವ ತಿದ್ದುಪಡಿ ಮಸೂದೆ ನಾಳೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಸೂದೆ ಮಂಡಿಸಲಿದ್ದಾರೆ. ನಿನ್ನೆ ಲೋಕಸಭೆಯಲ್ಲಿ ಏಳು ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಧಾರ್ಮಿಕ ನಂಬಿಕೆಗಳಿಗಾಗಿ ಭಾರತದ ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ತುತ್ತಾದ ವ್ಯಕ್ತಿಗಳಿಗೆ ಭಾರತದ ಪೌರತ್ವ ನೀಡುವ ಪ್ರಸ್ತಾಪವನ್ನು ಇದು ಒಳಗೊಂಡಿದೆ. ಕೇವಲ ಮುಸ್ಲಿಂಮೇತರರು ಮಾತ್ರ ಈ ಕಾನೂನಿನ ವ್ಯಾಪ್ತಿಗೆ ಬರಲಿದ್ದಾರೆ.  ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಮಸೂದೆಯನ್ನು ಬಲವಾಗಿ ವಿರೋಧಿಸಿವೆ

ಮತ್ತಷ್ಟು ಸುದ್ದಿಗಳು

Latest News

ಬೆಳಗಾವಿಯಲ್ಲಿ ಶಿವಸೇನಾ ಕಾರ್ಯಕರ್ತರಿಂದ ಪುಂಡಾಟ

Newsics.com ಬೆಳಗಾವಿ: ಶಿವಸೇನಾ ಕಾರ್ಯಕರ್ತರು ರಾಜ್ಯದ ಬೆಳಗಾವಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಬೆಳಗಾವಿ ಗಡಿ ಭಾಗದಲ್ಲಿ ಅವರನ್ನು ತಡೆದು ನಿಲ್ಲಿಸಿದಾಗ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಬೆಳಗಾವಿ ಮಹಾನಗರ...

ಅಮ್ಮನ ಹೆಲ್ಮೆಟ್ ಕಾಳಜಿ, ಅಪ್ಪನ ನಿರ್ಲಕ್ಷ್ಯ ಆರೋಪ

Newsics.com ರಾಂಚಿ: ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಅತ್ಯುತ್ತಮ ಚಿತ್ರವನ್ನು ಸಾಮಾಜಿಕ ಜಾಲ ತಾಣದ ಮೂಲಕ ಶೇರ್ ಮಾಡಿದ್ದಾರೆ. ಪ್ರಸಕ್ತ ಜಾರ್ಖಂಡ್ ನ ದುಮ್ಕಾ ಜಿಲ್ಲಾಧಿಕಾರಿಯಾಗಿರುವ ರಾಜೇಶ್ವರಿ ಬಿ ಅವರು...

ರೈಲು ಸಿಗ್ನಲ್ ಹಾಳು ಮಾಡಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ

Newsics.com ಬೆಂಗಳೂರು: ರೈಲ್ವೇ ಸುರಕ್ಷಾ ದಳದ ಪೊಲೀಸರು ಖತರ್ ನಾಕ್ ದರೋಡೆಕೋರನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾತ್ರಿ ಸಂಚರಿಸುತ್ತಿದ್ದ ರೈಲುಗಳಲ್ಲಿ ದರೋಡೆ ಮಾಡುವುದರಲ್ಲಿ ಕುಖ್ಯಾತಿ ಪಡೆದಿದ್ದ. 25 ವರ್ಷ ಪ್ರಾಯದ ಆರೋಪಿಯನ್ನು ಜನವರಿ 18ರಂದು ಬಂಧಿಸಲಾಗಿದೆ....
- Advertisement -
error: Content is protected !!