Saturday, December 2, 2023

ಪೌರತ್ವ ತಿದ್ದುಪಡಿ ಮಸೂದೆ: ಲೋಕಸಭೆಯಲ್ಲಿ ಮಂಡನೆ

Follow Us

ನವದೆಹಲಿ:  ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಮಂಡಿಸಿದರು.  ಬಳಿಕ ಮಾತನಾಡಿದ ಅವರು ಇದು ಅಲ್ಪ ಸಂಖ್ಯಾತರ  ಹಿತಾಸಕ್ತಿಗೆ ವಿರುದ್ಧ ಎಂಬ ಆರೋಪವನ್ನು ತಳ್ಳಿಹಾಕಿದರು. ಈ ತಿದ್ದುಪಡಿಯಿಂದಾಗಿ ಎಲ್ಲರಿಗೆ ಒಳಿತಾಗಲಿದೆ ಎಂದು ಶಾ ನುಡಿದರು. ಅಮಿತ್ ಶಾ ಅವರ ಹೇಳಿಕೆಯನ್ನು ಪ್ರತಿಪಕ್ಷ ಸದಸ್ಯರು ತೀವ್ರ ಶಬ್ದಗಳಲ್ಲಿ ಖಂಡಿಸಿದರು. ಹೈದರಾಬಾದ್ ಸಂಸತ್ ಸದಸ್ಯ ಒವೈಸಿ ಅತ್ಯುಗ್ರ ಶಬ್ದಗಳಲ್ಲಿ ಟೀಕಿಸಿದರು. ಭಾರತದ ನೆರೆಯ ದೇಶಗಳಿಂದ ವಲಸೆ ಬಂದಿರುವ ಮುಸ್ಲಿಂಮೇತರ ನಾಗರಿಕರಿಗೆ ಪೌರತ್ವ ನೀಡುವ ಪ್ರಸ್ತಾಪ ಇದು ಒಳಗೊಂಡಿದೆ.  2014 ಡಿಸೆಂಬರ್ 31ರೊಳಗೆ ಬಂದವರಿಗೆ ಇದು ಅನ್ವಯವಾಗಲಿದೆ. ಈಶಾನ್ಯ ರಾಜ್ಯಗಳಲ್ಲಿ ಕೂಡ  ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 10ಕ್ಕೆ  ವಿದ್ಯಾರ್ಥಿ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!