ನವದೆಹಲಿ: ಬಹು ಚರ್ಚಿತ ಪೌರತ್ವ ತಿದ್ದುಪಡಿ ವಿಧೇಯಕ ಕಾನೂನಿನ ಮಾನ್ಯತೆ ಪಡೆದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ತಿದ್ದುಪಡಿ ಮಸೂದೆಗೆ ಸಹಿ ಹಾಕಿದ್ದಾರೆ. ಸಂಸತ್ತಿನ ಉಭಯ ಸದನಗಳು ಈ ತಿದ್ದುಪಡಿ ಮಸೂದೆಯನ್ನು ಈಗಾಗಲೇ ಅಂಗೀಕರಿಸಿವೆ. ಭಾರತದ ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ಕಿರುಕುಳಕ್ಕೆ ಗುರಿಯಾದವರಿಗೆ ದೇಶದ ಪೌರತ್ವ ನೀಡುವ ಉದ್ದೇಶವನ್ನು ಈ ಕಾನೂನು ಹೊಂದಿದೆ. ಆದರೆ ಕೇವಲ ಮುಸ್ಲಿಂಮೇತರ ವ್ಯಕ್ತಿಗಳು ಮಾತ್ರ ಇದಕ್ಕೆ ಅರ್ಹರಾಗಿದ್ದಾರೆ.