ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಹೊಸ ಡಿಜಿ-ಐಜಿಪಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಿವೃತ್ತಿ ಹಿನ್ನೆಲೆಯಲ್ಲಿ ಸೇವಾ ಹಿರಿತನ ಆಧಾರದ ಮೇಲೆ ಪ್ರವೀಣ್ ಸೂದ್ ರಾಜ್ಯ ಡಿಜಿಪಿಯಾಗಿದ್ದಾರೆ.
ಪ್ರವೀಣ್ ಸೂದ್ ಹಿಮಾಚಲಪ್ರದೇಶ ಮೂಲದ 1986ನೇ ಬ್ಯಾಚ್ ನವರು. ಪ್ರವೀಣ್ ಸೂದ್ ಅವರಿಗೆ ನಾಲ್ಕು ವರ್ಷಗಳ ಸೇವಾವಧಿ ಇದೆ.