Monday, November 29, 2021

ಭಾರತ ಪ್ರವಾಸ ಮುಗಿಸಿ ವಾಪಸಾದ ಟ್ರಂಪ್ ದಂಪತಿ

Follow Us

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಹಿಂತಿರುಗಿದರು.
ಮಂಗಳವಾರ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡ ಬಳಿಕ ಟ್ರಂಪ್ ದಂಪತಿ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದರು.
ರಾಷ್ಟ್ರಪತಿ ಭವನದಲ್ಲಿನ ಔತಣಕೂಟ ಸ್ವೀಕರಿಸಿ ಹೊರಬಂದ ಟ್ರಂಪ್, ಪ್ರಧಾನಿ ಮೋದಿಯವರನ್ನು ಒಮ್ಮೆ ತಬ್ಬಿಕೊಂಡು ಧನ್ಯವಾದ ತಿಳಿಸಿದರು. ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಹಸ್ತಲಾಘವ ಮಾಡಿ, ಅಲ್ಲಿದ್ದ ಗಣ್ಯರತ್ತ ಕೈಬೀಸಿ ತಮ್ಮ ಕಾರನ್ನೇರಿ ವಿಮಾನ ನಿಲ್ದಾಣಕ್ಕೆ ತೆರಳಿದರು.
ಔತಣಕೂಟದಲ್ಲಿ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಮತ್ತು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಸೇರಿದಂತೆ ಕೇಂದ್ರದ ಸಚಿವರು ಭಾಗಿಯಾಗಿದ್ದರು. ಅಲ್ಲದೆ, ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಪ್ರಸಿದ್ಧ ಶೆಫ್ ವಿಕಾಸ್ ಖನ್ನಾ ಕೂಡ ಉಪಸ್ಥಿತರಿದ್ದರು. ಟ್ರಂಪ್ ದಂಪತಿ ಔತಣಕೂಟದಲ್ಲಿ ಭಾಗಿಯಾಗಿದ್ದ ಗಣ್ಯರೊಂದಿಗೆ ಹಸ್ತಲಾಘವ ಮಾಡುವುದರೊಂದಿಗೆ ಖುದ್ದಾಗಿ ಪರಿಚಯಿಸಿಕೊಂಡಿದ್ದು ಬಹು ವಿಶೇಷವಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...
- Advertisement -
error: Content is protected !!