ನೈರೋಬಿ: ಭಾರಿ ದಂತಗಳನ್ನು ಹೊಂದಿದ್ದ ಆಫ್ರಿಕಾದ ಕೊನೆಯ ಆನೆ ಬಿಗ್ ಟಿಮ್ ಇನ್ನಿಲ್ಲ.
ಕೀನ್ಯಾ ವನ್ಯಜೀವಿ ಸೇವಾ ಇಲಾಖೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಬಿಗ್ ಟಿಮ್ ತನ್ನ 50ನೇ ವಯಸ್ಸಿನಲ್ಲಿ ಮೃತಪಟ್ಟಿದೆ. ಕೀನ್ಯಾದ ಮಡಾ ಏರಿಯಾದಲ್ಲಿರುವ ಅಂಬೊಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವಿಗೀಡಾಗಿದೆ ಎಂದು ತಿಳಿಸಿದ್ದಾರೆ.
ಬಿಗ್ ಟಿಮ್ ಕಳೇಬರವನ್ನು ಕೀನ್ಯಾ ರಾಜಧಾನಿ ನೈರೋಬಿಯಲ್ಲಿರುವ ಕೀನ್ಯಾದ ರಾಷ್ಟ್ರೀಯ ಮ್ಯೂಸಿಯಂಗೆ ತರಲಾಗಿದೆ. ಆನೆಯ ಕಳೇಬರವನ್ನು ಶಿಕ್ಷಣ ಮತ್ತು ಪ್ರದರ್ಶನ ಉದ್ದೇಶಕ್ಕಾಗಿ ಸಂರಕ್ಷಿಸಿಡಲು ಟಾಕ್ಸಿಡರ್ಮಿಸ್ಟ್ ಸಿದ್ಧತೆ ನಡೆಸಿದ್ದಾರೆ.
ಭಾರಿ ದಂತದ ಕೀನ್ಯಾ ಆನೆ ಬಿಗ್ ಟಿಮ್ ಇನ್ನಿಲ್ಲ
Follow Us