ನವದೆಹಲಿ/ ಬೆಂಗಳೂರು: ಮಹದಾಯಿ ಯೋಜನೆಯ ನೀರು ಬಳಕೆ ಕುರಿತು ಮಧ್ಯಂತರ ಆದೇಶದ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಮಹದಾಯಿ ನೀರು ಯೋಜನಾ ಪ್ರಾಧಿಕಾರ ನೀಡಿದ್ದ ಮಧ್ಯಂತರ ಆದೇಶದಂತೆ ಕರ್ನಾಟಕ 13.12 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ಸಿಕ್ಕಿತ್ತು. ಇದಕ್ಕೆ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಗೋವಾದ ಒತ್ತಡ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನೆಪ ಮುಂದೆ ಮಾಡಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರಲಿಲ್ಲ.
ಸಿಎಂ ಸಂತಸ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಮಂಡಳದ ಅಧಿವೇಶನದಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ಇದು ಕರ್ನಾಟಕದ ಪಾಲಿಗೆ ದೊಡ್ಡ ಗೆಲುವು ಎಂದಿದ್ದಾರೆ.
ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದರೆ ಹುಬ್ಬಳ್ಳಿ -ಧಾರವಾಡ ಕುಡಿಯುವ ನೀರಿಗೆ 5 ಟಿಎಂಸಿ ಮತ್ತು ಹೈಡ್ರೋ ಪ್ರೊಜೆಕ್ಟ್ ಗೆ 8 ಟಿಎಂಸಿ ನೀರು ಬಳಸಲು ಕರ್ನಾಟಕಕ್ಕೆ ಅವಕಾಶವಾಗಲಿದೆ.