ಬೆಂಗಳೂರು: ಮುಂಬಡ್ತಿ ಬಯಸುವ ಸರ್ಕಾರಿ ನೌಕರರು ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ
ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಹುದು.
ಇಂತಹದೊಂದು ಮಾಹಿತಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೀಡಿದೆ.
ಮೇಲಧಿಕಾರಿಗಳ ಲಿಖಿತ ಅನುಮತಿ ಪಡೆಯದೆ ನೇರವಾಗಿ ತಾವೇ ಅರ್ಜಿ ಭರ್ತಿ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬಹುದು ಎಂದು ಕೆಪಿಎಸ್ ಸಿ ಹೇಳಿದೆ
ಮುಂಬಡ್ತಿಗಾಗಿ ಇಲಾಖೆ ನಡೆಸುವ ಪರೀಕ್ಷೆಗಳನ್ನು ಬರೆಯಲು ತಮ್ಮ ಘಟಕದ ಮೇಲಧಿಕಾರಿಗಳಿಂದ ಸರ್ಕಾರಿ ನೌಕರರು ಅನುಮತಿ ಪಡೆಯಬೇಕಿತ್ತು. ಲಿಖಿತ ಅನುಮತಿ ಪತ್ರ ಇದ್ದವರು ಮಾತ್ರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಿತ್ತು.
ಮುಂಬಡ್ತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇಲಧಿಕಾರಿಗಳ ಅನುಮತಿ ಅನಗತ್ಯ- ಕೆಪಿಎಸ್ಸಿ
Follow Us