ಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಎಆರ್ಸಿ) ಇದೀಗ ವಿದ್ಯುತ್ ದರ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್ಗೆ 30ರಿಂದ 50 ಪೈಸೆ ಬೆಲೆ ಏರಿಸುವಂತೆ ಕೋರಿದೆ.
ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಮಾಡುವ ಕೆಪಿಟಿಸಿಎಲ್ ಅಧೀನದಲ್ಲಿರುವ 5 ಎಸ್ಕಾಂಗಳು ವಿದ್ಯುತ್ ದರ ಏರಿಕೆ ಕುರಿತಂತೆ ಈಗಾಗಲೇ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ವಿದ್ಯುತ್ ಉತ್ಪಾದನೆ, ಆಡಳಿತಾತ್ಮಕ ವೆಚ್ಚ ಇನ್ನಿತರ ವೆಚ್ಚಗಳ ಆಧಾರದ ಮೇಲೆ ಪ್ರತಿ ಯುನಿಟ್ಗೆ 30ರಿಂದ 50 ಪೈಸೆ ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಕಿಸಿದ್ದು, ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ತಕ್ಷಣ ದರ ಏರಿಕೆ ಘೋಷಣೆಯಾಗಲಿದೆ. 2019ರ ಮಾರ್ಚ್ನಲ್ಲಿ ಪ್ರತಿ ಯುನಿಟ್ಗೆ 29ರಿಂದ 33 ಪೈಸೆ ಹೆಚ್ಚಿಸಲಾಗಿತ್ತು.
ವಿದ್ಯುತ್ ದರ ಹೆಚ್ಚಳ ಸಂಭವ
Follow Us