Saturday, March 6, 2021

ಶೇ.66 ಮತದಾನ; ಬಿಜೆಪಿ ಮೇಲುಗೈ ಸಾಧ್ಯತೆ

ಬೆಂಗಳೂರು: ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಗುರುವಾರ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿತ್ತು. ರಾಜ್ಯದಲ್ಲಿ ಶೇ.66.25ರಷ್ಟು ಮತ ಚಲಾವಣೆಯಾಗಿದೆ.ಚುನಾವಣಾ ಕಣದಲ್ಲಿ 156 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.9ರಂದು ಬಹಿರಂಗವಾಗಲಿದೆ.ಈ ಉಪ ಚುನಾವಣೆಯ ಫಲಿತಾಂಶ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು‌ ನಿರ್ಣಯಿಸಲಿದೆ.ಮತಗಟ್ಟೆ ಸಮೀಕ್ಷೆ ಪ್ರಕಾರ 15 ಕ್ಷೇತ್ರಗಳಲ್ಲಿ ಬಿಜೆಪಿ 9 ರಿಂದ 11 ಸ್ಥಾನ, ಕಾಂಗ್ರೆಸ್ 2 ರಿಂದ 4 ಸ್ಥಾನ, ಜೆಡಿಎಸ್ 2 ಸ್ಥಾನ ಹಾಗೂ ಇತರರು ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.ಸಿ-ವೋಟರ್ ಸಮೀಕ್ಷೆಯಲ್ಲೂ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಇದರ ಪ್ರಕಾರ ಬಿಜೆಪಿ 9 ರಿಂದ 12, ಕಾಂಗ್ರೆಸ್ 3 ರಿಂದ 6, ಜೆಡಿಎಸ್ 1 ಮತ್ತು ಇತರರು ಒಂದು ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 18327ಮಂದಿಗೆ ಕೊರೋನಾ ಸೋಂಕು, 108 ಜನರ ಬಲಿ

newsics.com ನವದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 18,327 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ, 1,11,92,088,...

ಬಿಜೆಪಿ ನಾಯಕರ ಮೇಲೆ ಹಲ್ಲೆ ಆರೋಪ: ಶಾಸಕ ಸಂಗಮೇಶ್ ಪುತ್ರ ಬಂಧನ

newsics.com ಶಿವಮೊಗ್ಗ: ಕಬ್ಬಡಿ ಪಂದ್ಯದ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಂಗಮೇಶ್ ಪುತ್ರ ಬಸವೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ನಾಯಕರು ನೀಡಿರುವ ಹಲ್ಲೆ ದೂರಿಗೆ ಸಂಬಂಧಿಸಿದಂತೆ ಪೊಲೀಸರು...

ಮಾನ ಹಾನಿಕರ ವರದಿಗೆ ನಿರ್ಬಂಧ: ಇಂದು ಸಚಿವರ ಅರ್ಜಿ ವಿಚಾರಣೆ

newsics.com ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ರಾಜ್ಯದ ಆರು ಸಚಿವರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ...
- Advertisement -
error: Content is protected !!