ನವದೆಹಲಿ: ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆ ಈಗ ವಿಶ್ವದ 8 ಅದ್ಭುತಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ರಾಷ್ಟ್ರದ ಮೊದಲ ಗೃಹ ಸಚಿವರಾದ ವಲ್ಲಭಬಾಯ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಶಾಂಘೈ ಸಹಕಾರ ಸಂಸ್ಥೆ ವಿಶ್ವದ 8 ಅದ್ಭುತಗಳ ಪಟ್ಟಿಗೆ ಸೇರಿಸಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
ಗುಜರಾತ್ನ ನರ್ಮದಾ ಕಣಿವೆಯಲ್ಲಿ ಈ ಬೃಹತ್ ಪ್ರತಿಮೆಯನ್ನು ಪಟೇಲ್ ಅವರ 143ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ 2018ರ ಅಕ್ಟೋಬರ್ನಲ್ಲಿ ಲೋಕಾರ್ಪಣೆಗೊಳಿಸಿದ್ದರು.
ಸರ್ದಾರ್ ಪ್ರತಿಮೆ ಈಗ ವಿಶ್ವದ 8 ಅದ್ಭುತಗಳಲ್ಲೊಂದು!
Follow Us