Thursday, May 26, 2022

ಒಂದೇ ನಿಮಿಷದಲ್ಲಿ 109 ಪುಶ್ ಅಪ್: ಗಿನ್ನೆಸ್ ವಿಶ್ವ ದಾಖಲೆ ಬರೆದ ನಿರಂಜೋಯ್ ಸಿಂಗ್

Follow Us

newsics.com

ಇಂಫಾಲ (ಮಣಿಪುರ): ಒಂದೇ ನಿಮಿಷದಲ್ಲಿ ಮಣಿಪುರದ ತೌನೋಜಮ್ ನಿರಂಜೋಯ್ ಸಿಂಗ್ 109 ಪುಶ್-ಅಪ್ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.

ಈ ಹಿಂದೆ ಎರಡು ಬಾರಿ ಗಿನ್ನೆಸ್ ದಾಖಲೆ ಬರೆದಿದ್ದ 24 ವರ್ಷದ ನಿರಂಜೋಯ್ ಸಿಂಗ್, ಒಂದೇ ನಿಮಿಷದಲ್ಲಿ 109 ಪುಶ್-ಅಪ್‌ಗಳನ್ನು ಮಾಡುವ ಮೂಲಕ ಒಂದು ನಿಮಿಷದಲ್ಲಿ 105 ಪುಶ್-ಅಪ್ ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ.

ಮಣಿಪುರ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆ, ಇಂಫಾಲ್‌ನ ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಪರ್ಧೆಯಲ್ಲಿ ನಿರಂಜೋಯ್ ಸಿಂಗ್ ಈ ಸಾಧನೆ ಮಾಡಿದ್ದಾರೆ.
ಮಣಿಪುರದ ನಿರಂಜೋಯ್ ಸಿಂಗ್ ನಂಬಲಾಗದ ಶಕ್ತಿ ನೋಡಲು ಅದ್ಭುತವಾಗಿದೆ. ಇವರ ಸಾಧನೆ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ಅವಳಿ ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾ ಆನೆ!

ಕೆಂಪು‌ ಕಾಡುಕೋಳಿ

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!