ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 2,496 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 25,839 ಆಗಿದೆ. 87 ಜನರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 1,267 ಜನರಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದಲ್ಲಿ ಮಂಗಳವಾರ 1,142 ಜನರ ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ಒಂದರಲ್ಲಿಯೇ 664 ಸೋಂಕಿತರು ಸಂಪೂರ್ಣವಾಗಿ ಕೊರೋನಾ ಸೋಂಕಿನಿಂದಾಗಿ ಗುಣಮುಖರಾಗಿದ್ದಾರೆ. ಬೆಂಗಳೂರಲ್ಲಿ ಇವತ್ತು ಒಂದೇ ದಿನ 56 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 377 ಏರಿಕೆಯಾಗಿದೆ. ಬೆಂಗಳೂರು ನಗರ – 1267, ಮೈಸೂರು – 125, ಕಲಬುರ್ಗಿ – 121, ಧಾರವಾಡ – 100, ಬಳ್ಳಾರಿ – 99, ಕೊಪ್ಪಳ – 98, ದಕ್ಷಿಣ ಕನ್ನಡ – 91, ಬಾಗಲಕೋಟೆ – 78, ಉಡುಪಿ – 73, ಉತ್ತರ ಕನ್ನಡ ಮತ್ತು ಬೆಳಗಾವಿ – 64, ವಿಜಯಪುರ – 52, ತುಮಕೂರು – 47, ಬೀದರ್ – 42, ಮಂಡ್ಯ – 38, ರಾಯಚೂರು – 25, ದಾವಣಗೆರೆ – 17, ಬೆಂಗಳೂರು ಗ್ರಾಮಾಂತರ – 14, ಚಿಕ್ಕಬಳ್ಳಾಪುರ – 13, ಕೋಲಾರ – 11, ಶಿವಮೊಗ್ಗ, ಕೊಡಗು ಮತ್ತು ಚಿತ್ರದುರ್ಗ – 10, ಗದಗ -09, ಚಾಮರಾಜನಗರ – 08, ಹಾಸನ -04, ಚಿಕ್ಕಮಗಳೂರು – 03, ಯಾದಗಿರಿ – 02 ಮತ್ತು ರಾಮನಗರ – 01 ಸೇರಿ ಇಂದು 2496 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.