ಬೆಂಗಳೂರು: 13 ವರ್ಷಗಳ ಕಾನೂನು ಹೋರಾಟ ನಡೆಸಿದ 72 ವರ್ಷದ ಟೈಲರ್ ಒಬ್ಬರು ತಮ್ಮ ವಿರುದ್ದ ಕಾರ್ಮಿಕ ಇಲಾಖೆ ಹೂಡಿದ್ದ ಪ್ರಕರಣದಿಂದ ಮುಕ್ತರಾಗಿದ್ದಾರೆ.
ಟೈಲರಿಂಗ್ ಶಾಪ್ನಲ್ಲಿ ಇಬ್ಬರು ಬಾಲಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದಕ್ಕಾಗಿ ಕಾರ್ಮಿಕ ಇಲಾಖೆ 2006ರಲ್ಲಿ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಧೀನ ನ್ಯಾಯಾಲಯ ಆ ಟೈಲರ್ಗೆ ವಿಧಿಸಿದ ಶಿಕ್ಷೆಯ ಆದೇಶವನ್ನು ನ್ಯಾ.ಸೋಮಶೇಖರ್ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ರದ್ದುಗೊಳಿಸಿದೆ.
ಪ್ರಕರಣದಲ್ಲಿಅರ್ಜಿದಾರ ಸಮೀವುಲ್ಲಾಗೆ ಸಹಕರಿಸಲು ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡಿದ್ದ ನ್ಯಾಯವಾದಿ ಎಂ.ಎಸ್. ಅಶ್ವಥ್ರೆಡ್ಡಿ ಅವರು ಪ್ರಾಸಿಕ್ಯೂಷನ್ ಹೇಳಿಕೆಗಳಲ್ಲಿ ವ್ಯತ್ಯಯ ಇರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆದು ಆರೋಪಿ ಸಮೀವುಲ್ಲಾಖುಲಾಸೆಯಾಗಲು ಕಾರಣವಾಗಿದೆ.
ಸಿಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಪ್ರೇಟ್ ಕೋರ್ಟ್ 2010ರ ಜು.3ರಂದು ಸಮೀವುಲ್ಲಾಅಪರಾಧಿ ಎಂದು ಸಾರಿ ಕಾರ್ಮಿಕ ಕಾಯಿದೆ ಉಲ್ಲಂಘನೆಗಾಗಿ 18,250 ರೂ. ದಂಡವನ್ನು ವಿಧಿಸಿತ್ತು. ಆ ಆದೇಶವನ್ನು 2010ರ ನ.4ರಂದು ತ್ವರಿತಗತಿ ನ್ಯಾಯಾಲಯ ಕೂಡ ಎತ್ತಿಹಿಡಿದಿತ್ತು. ಆ ತೀರ್ಪು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
13 ವರ್ಷದ ಕಾನೂನು ಹೋರಾಟದಲ್ಲಿ ಗೆದ್ದ 72 ವರ್ಷದ ಟೈಲರ್!
Follow Us