Saturday, April 17, 2021

ಬೆಂಗಳೂರು ದೂರದರ್ಶನದ 14 ಸಿಬ್ಬಂದಿಗೆ ಕ್ವಾರಂಟೈನ್

ಬೆಂಗಳೂರು: ಕೊರೋನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಚಂದನವಾಹಿನಿಯ (ದೂರದರ್ಶನ ಕೇಂದ್ರದ) 14 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೆ ದೂರದರ್ಶನ ಕೇಂದ್ರದ ನಿರ್ದೇಶಕರು ಸೇರಿದಂತೆ ಒಟ್ಟು 20 ಜನರಿಗೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗಿದೆ.
ಕರ್ತವ್ಯನಿಮಿತ್ತ ತಮಿಳುನಾಡಿಗೆ ತೆರಳಿದ್ದ ಕೊರೋನಾ ಸೋಂಕಿತ ಕ್ಯಾಮರಾಮನ್ ನ್ಯೂಸ್ ಪ್ರಸಾರದ ವೇಳೆ ಇಲ್ಲಿ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ‌ಕ್ರಮ‌ ಕೈಗೊಳ್ಳಲಾಗಿದೆ.
ಇದರಿಂದಾಗಿ ದೂರದರ್ಶನ‌ ಕೇಂದ್ರದಲ್ಲಿ ಸಿಬ್ಬಂದಿ‌ ಕೊರತೆಯುಂಟಾಗಿದ್ದು, ದೂರದರ್ಶನದ ನ್ಯೂಸ್ ಬುಲೆಟಿನ್ ಗಳ ಪೈಕಿ ಬೆಳಗ್ಗೆ ಮತ್ತು ಮಧ್ಯಾಹ್ನ ನ್ಯೂಸ್ ರದ್ದುಪಡಿಸಿ ಸಂಜೆಯ ಮೂರು ಬುಲೆಟಿನ್ ಮಾತ್ರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಐದು ವಾರ್ತಾ ಸಂಚಿಕೆಗಳ ಪೈಕಿ ಇದೀಗ ಮೂರು ಮಾತ್ರ ಪ್ರಸಾರವಾಗುತ್ತಿವೆ. ಬೆಳಗ್ಗಿನ 11 ಮತ್ತು ಮಧ್ಯಾಹ್ನದ 1 ಗಂಟೆ ಸುದ್ದಿ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಜೆ 4.30, 7 ಮತ್ತು ರಾತ್ರಿ 9 ಗಂಟೆಗೆ ಸುದ್ದಿ ಪ್ರಸಾರವಾಗುತ್ತಿದೆ.
ಕೊರೋನಾ ಸೋಂಕಿತ ಕ್ಯಾಮರಾಮನ್ ಮೇ 23 ರಂದು ಬೆಂಗಳೂರು ಚಂದನವಾಹಿನಿ ಸುದ್ದಿ ಪ್ರಸಾರದ ವೇಳೆ ಕರ್ತವ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ಯಾಮರಾಮನ್ ಸಂಪರ್ಕಕ್ಕೆ ಬಂದಿರುವ ಆ್ಯಂಕರ್ ಸೇರಿದಂತೆ ಇತರ ಸಿಬ್ಬಂದಿಗೆ ಕೊರೋನಾ ಸಂಕಷ್ಟ ಎದುರಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!