ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 4,752 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,39,571ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಮವಾರ ಕೊರೋನಾಗೆ 98 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 2,594ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಮವಾರ ಬೆಂಗಳೂರಿನಲ್ಲಿ 1497 ಜನರಿಗೆ ಕೋರೋಣ ಸೋಂಕು ತಗುಲಿದೆ. ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 27 ಸೋಂಕಿತರು ಸಾವನ್ನಪ್ಪಿದ್ದಾರೆ
ಈವರೆಗೆ ಕೊರೋನಾ ಸೋಂಕಿತರಾದ 62,500 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 74,469 ಆಗಿದೆ.
ಬೆಂಗಳೂರು ನಗರ – 1497, ಮೈಸೂರು – 372, ಬಳ್ಳಾರಿ – 305, ಬಾಗಲಕೋಟೆ – 209, ಧಾರವಾಡ – 191, ಕಲಬುರ್ಗಿ – 170, ಕೊಪ್ಪಳ – 157, ಶಿವಮೊಗ್ಗ – 155, ದಕ್ಷಿಣ ಕನ್ನಡ – 153, ಮಂಡ್ಯ – 152, ಹಾಸನ – 131, ಉಡುಪಿ – 126, ತುಮಕೂರು – 122, ರಾಯಚೂರು – 115, ಗದಗ – 100, ಹಾವೇರಿ – 99, ವಿಜಯಪುರ – 92, ಯಾದಗಿರಿ – 86, ರಾಮನಗರ – 68, ಬೆಳಗಾವಿ – 60, ಚಿಕ್ಕಬಳ್ಳಾಪುರ – 58, ಚಾಮರಾಜನಗರ – 52, ಬೀದರ್ – 50, ಚಿಕ್ಕಮಗಳೂರು – 46, ದಾವಣಗೆರೆ – 41, ಕೋಲಾರ – 40, ಕೊಡಗು – 39, ಚಿತ್ರದುರ್ಗ – 33, ಉತ್ತರ ಕನ್ನಡ – 31 ಮತ್ತು ಬೆಂಗಳೂರು ಗ್ರಾಮಾಂತರ – 02 ಸೇರಿದಂತೆ ಒಟ್ಟು 4,725 ಜನರಿಗೆ ಕೊರೋನಾ ಸೋಂಕು ತಗುಲಿದೆ.