Wednesday, May 18, 2022

ಬೆಂಗಳೂರಿನಲ್ಲಿ 1568, ರಾಜ್ಯದಲ್ಲಿ 2960 ಮಂದಿಗೆ ಕೊರೋನಾ, 35 ಬಲಿ

Follow Us

newsics.com
ಬೆಂಗಳೂರು: ಇಂದು(ನ.6) ರಾಜ್ಯದಲ್ಲಿ 2960 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,41,889 ಕ್ಕೆ ಏರಿಕೆಯಾಗಿದೆ.
ಕೊರೋನಾ ಸೋಂಕಿಗೆ ರಾಜ್ಯದಲ್ಲಿಂದು 35 ಮಂದಿ ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ11247 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 2701 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ 797204 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 33,319 ಸಕ್ರಿಯ ಪ್ರಕರಣಗಳಿದ್ದು, 901 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೊರೋನಾ ವೈರಸ್ ಒಟ್ಟು 841889 ಸೋಂಕಿತ ಪ್ರಕರಣಗಳ ಪೈಕಿ 797204 ಸೋಂಕಿತರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದಲ್ಲೇ 2701 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ ರಾಜ್ಯದಲ್ಲಿ 33319 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 27098 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 83039 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 110137 ಜನರನ್ನು ಕೋವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 85,14,653 ಜನರಿಗೆ ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.
ಬಾಗಲಕೋಟೆ 25, ಬಳ್ಳಾರಿ 66, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 69, ಬೆಂಗಳೂರು 1568, ಬೀದರ್ 1, ಚಾಮರಾಜನಗರ 18, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 42, ಚಿತ್ರದುರ್ಗ 42, ದಕ್ಷಿಣ ಕನ್ನಡ 79, ದಾವಣಗೆರೆ 44, ಧಾರವಾಡ 33, ಗದಗ 5, ಹಾಸನ 97, ಹಾವೇರಿ 6, ಕಲಬುರಗಿ 32, ಕೊಡಗು 28, ಕೋಲಾರ 48, ಕೊಪ್ಪಳ 16, ಮಂಡ್ಯ 119, ಮೈಸೂರು 148, ರಾಯಚೂರು 17, ರಾಮನಗರ 32, ಶಿವಮೊಗ್ಗ 57, ತುಮಕೂರು 161, ಉಡುಪಿ 61, ಉತ್ತರ ಕನ್ನಡ 17, ವಿಜಯಪುರ 53, ಯಾದಗಿರಿ 18 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಹೆಚ್ಚಿನ ಮಾಹಿತಿಗಾಗಿ: 06-11-2020 HMB English

ನೌಕರರು, ಕಾರ್ಮಿಕರಿಗೆ ಕ್ವಾರಂಟೈನ್ ರಜೆ ನೀಡಲು ಸರ್ಕಾರ ಆದೇಶ

ರಾಜ್ಯದಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧಕ್ಕೆ ತೀರ್ಮಾನ

ಮತ್ತಷ್ಟು ಸುದ್ದಿಗಳು

Latest News

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ...

ಕನ್ನಡ ಕಲಿಕೆಗೆ‌ ಬಂತು ಸರ್ಕಾರಿ ಇ- ಪೋರ್ಟಲ್

newsics.com ಬೆಂಗಳೂರು: ಕನ್ನಡ ಕಲಿಯುವವರಿಗಾಗಿ ಸರ್ಕಾರಿ ಇ‌- ಕನ್ನಡ ಪೋರ್ಟಲ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಕರ್ನಾಟಕ ಹಾಗು ಹೊರಗೆ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್‌ನಲ್ಲಿ ಕನ್ನಡ ಕಲಿಯಬಹುದು. ಇ-ಕನ್ನಡ ಪೋರ್ಟಲ್‌ಗೆ ಹೋಗಿ ಆನ್‌ಲೈನ್...

ನಾಳೆ ಮಧ್ಯಾಹ್ನ 12:30ಕ್ಕೆ SSLC ರಿಸಲ್ಟ್

newsics.com ಬೆಂಗಳೂರು: ಗುರುವಾರ (ಮೇ 19) ಮಧ್ಯಾಹ್ನ 12.30ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ. 'ನಾಳೆ ಮಧ್ಯಾಹ್ನ 12.30ಕ್ಕೆ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1...
- Advertisement -
error: Content is protected !!