ಕೊಚ್ಚಿ: ಪರಿಸರ ಸಂಬಂಧಿತ ಕಾನೂನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾರಡ್ ನಲ್ಲಿರುವ 16 ಮಹಡಿಗಳ ಕಟ್ಟಡವನ್ನು 9 ಸೆಕೆಂಡ್ ನಲ್ಲಿ ನೆಲಸಮಗೊಳಿಸಲಾಯಿತು. 55 ಮೀಟರ್ ಎತ್ತರ ಇದ್ದ ಜೈನ್ ಕೋರಲ್ ಕೋವ್ ಕಟ್ಟಡ ಸಮುಚ್ಚಯವನ್ನು 350 ಕಿಲೋ ಸ್ಪೋಟಕ ಬಳಸಿ ನಾಶಗೊಳಿಸಲಾಯಿತು. ಬಿಗಿ ಭದ್ರತೆ ಮಧ್ಯೆ ಈ ಕಾರ್ಯಾಚರಣೆ ನಡೆಸಲಾಯಿತು.