Wednesday, July 6, 2022

ಬೆಂಗಳೂರಿನಲ್ಲಿ 1848, ರಾಜ್ಯದಲ್ಲಿ 5619 ಜನರಿಗೆ ಸೋಂಕು, 100 ಮಂದಿ ಬಲಿ

Follow Us

ಬೆಂಗಳೂರು: ರಾಜ್ಯದಲ್ಲಿ ಬುಧವಾರ 5619 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ.
ಕೊರೋನಾಗೆ 100 ಜನರು ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 2804ಕ್ಕೆ ಏರಿಕೆಯಾಗಿದೆ. 1,51,449 ಕೊರೋನಾ ಪ್ರಕರಣಗಳ ಪೈಕಿ 74,679 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 73,958 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯಾದ್ಯಂತ ಸುಮಾರು 633 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಬೆಂಗಳೂರು ನಗರ 1848, ಬಳ್ಳಾರಿ 631, ಬೆಳಗಾವಿ 293, ಮೈಸೂರು 261, ದಾವಣಗೆರೆ 224, ಧಾರವಾಡ – 199, ಕಲಬುರ್ಗಿ – 197, ಉಡುಪಿ – 173, ಕೊಪ್ಪಳ – 154, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ – 149, ಹಾಸನ – 137, ಚಿಕ್ಕಬಳ್ಳಾಪುರ – 129, ಉತ್ತರ ಕನ್ನಡ – 125, ಮಂಡ್ಯ – 123, ಬೆಂಗಳೂರು ಗ್ರಾಮಾಂತರ – 110, ರಾಯಚೂರು – 91, ಗದಗ – 78, ಯಾದಗಿರಿ – 76, ಹಾವೇರಿ – 71, ವಿಜಯಪುರ – 66, ಬೀದರ್ – 52, ಕೋಲಾರ – 49, ಚಿಕ್ಕಮಗಳೂರು – 48, ರಾಮನಗರ – 5, ಚಾಮರಾಜನಗರ – 38, ಶಿವಮೊಗ್ಗ – 35, ತುಮಕೂರು – 34, ಚಿತ್ರದುರ್ಗ – 24 ಮತ್ತು ಕೊಡಗು – 13 ಸೇರಿದಂತೆ ಒಟ್ಟು 5619 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಂದೂವರೆ ಲಕ್ಷ ಕೊರೋನಾ ಸೋಂಕಿತರ ಸಂಖ್ಯೆ ದಾಟಿದೆ. ಇದುವರೆಗೆ 1,51,449 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿಸಿದೆ.

ರಾಜ್ಯದಾದ್ಯಂತ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ, ಹಲವೆಡೆ ರೆಡ್ ಅಲರ್ಟ್ ಘೋಷಣೆ

 

ಮತ್ತಷ್ಟು ಸುದ್ದಿಗಳು

vertical

Latest News

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...

ಗೃಹ ಬಳಕೆ ಸಿಲಿಂಡರ್ ದರ ಮತ್ತೆ 50 ರೂಪಾಯಿ ಹೆಚ್ಚಳ

newsics.com ನವದೆಹಲಿ: ತೈಲ ಸಂಸ್ಥೆಗಳು ಎಲ್ ಪಿ ಜಿ ಬಳಕೆದಾರರಿಗೆ ಶಾಕ್ ನೀಡಿವೆ. ಗೃಹ ಬಳಕೆಯ ಸಿಲಿಂಡರ್ ದರ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಿಸಲಾಗಿದೆ.  ನೂತನ ದರ...
- Advertisement -
error: Content is protected !!