Tuesday, August 9, 2022

ಬೆಂಗಳೂರಿನಲ್ಲಿ 1852, ರಾಜ್ಯದಲ್ಲಿ 5172 ಮಂದಿಗೆ ಸೋಂಕು, 98 ಜನ ಬಲಿ

Follow Us

ಬೆಂಗಳೂರು: ರಾಜ್ಯದಲ್ಲಿ ಶನಿವಾರ 5172 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,29,287 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಶನಿವಾರ ಕೊರೋನಾ ಸೋಂಕಿನಿಂದ 98 ಮಂದಿ ಮೃತಪಟ್ಟಿದ್ದು, ಇದುವರೆಗೆ 2412 ಜನ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ 1852 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 57,396 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1683 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 18,579 ಕ್ಕೆ ಏರಿಕೆಯಾಗಿದೆ. 37,760 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಬೆಂಗಳೂರಿನಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಇದುವರೆಗೆ 1056 ಜನ ಮೃತಪಟ್ಟಿದ್ದಾರೆ.

ಆ.4ರಂದು ಸಿಎಂ ಬಿಎಸ್’ವೈ- ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಭೇಟಿ

 

ರಾಜ್ಯದಲ್ಲಿ ಶನಿವಾರ 3860 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಬಿಡುಗಡೆಯಾದವರ ಸಂಖ್ಯೆ 53,648 ಕ್ಕೆ ಏರಿಕೆಯಾಗಿದೆ. 73,219 ಸಕ್ರಿಯ ಪ್ರಕರಣಗಳಿದ್ದು, 602 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರ -1852, ಮೈಸೂರು – 365, ಬಳ್ಳಾರಿ 269, ಕಲಬುರ್ಗಿ ಮತ್ತು ಬೆಳಗಾವಿ – 219, ಧಾರವಾಡ – 184, ಹಾಸನ – 146, ದಕ್ಷಿಣ ಕನ್ನಡ – 139, ಉಡುಪಿ – 136, ಬಾಗಲಕೋಟೆ – 134, ವಿಜಯಪುರ – 129, ಶಿವಮೊಗ್ಗ – 119, ರಾಯಚೂರು – 109, ದಾವಣಗೆರೆ – 108, ಕೊಪ್ಪಳ – 108, ತುಮಕೂರು ಮತ್ತು ಗದಗ – 99, ಮಂಡ್ಯ – 95, ಬೆಂಗಳೂರು ಗ್ರಾಮಾಂತರ – 93, ಚಿಕ್ಕಬಳ್ಳಾಪುರ – 72, ಚಿತ್ರದುರ್ಗ – 60, ಚಿಕ್ಕಮಗಳೂರು – 57, ಬೀದರ್ ಮತ್ತು ಹಾವೇರಿ – 52, ಉತ್ತರ ಕನ್ನಡ ಮತ್ತು ರಾಮನಗರ – 51, ಚಾಮರಾಜನಗರ – 43, ಯಾದಗಿರಿ ಮತ್ತು ಕೋಲಾರ – 39 ಹಾಗೂ ಕೊಡಗು – 35 ಸೇರಿದಂತೆ ಒಟ್ಟು 5172 ಜನರಿಗೆ ಕೊರೋನಾ ಸೋಂಕು ತಗುಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...
- Advertisement -
error: Content is protected !!