Saturday, November 26, 2022

ಈ ‘ಸೂರ್ಯನ ಮೊಟ್ಟೆ’ಗೆ 2.70 ಲಕ್ಷ ರೂಪಾಯಿ!

Follow Us

newsics.com

ಭೋಪಾಲ್(ಮಧ್ಯಪ್ರದೇಶ): ಭಾರತದಲ್ಲಿ ‘ಸೂರ್ಯನ ಮೊಟ್ಟೆ’ ಎಂದು ಕರೆಸಿಕೊಳ್ಳುವ ಜಪಾನ್ ಮೂಲದ ಮಿಯಾಜಾಕಿ ಮಾವನ್ನು ಮಧ್ಯಪ್ರದೇಶದ ಭೋಪಾಲ್’ನ ದಂಪತಿ ಬೆಳೆದಿದ್ದು, ಈ‌ ಮಾವಿನಹಣ್ಣಿನ ಬೆಲೆ ಕೆ‌.ಜಿ.ಗೆ ಬರೋಬ್ಬರಿ 2.70 ಲಕ್ಷ ರೂಪಾಯಿ!

ಜಗತ್ತಿನ ಅತಿ ದುಬಾರಿ ಹಾಗೂ ವಿರಳ ಎನಿಸಿರುವ ಮಿಯಾಜಾಕಿ ಮಾವಿನಕಾಯಿಗಳನ್ನು ಮಧ್ಯ ಪ್ರದೇಶದ ಭೋಪಾಲ್’ನ ದಂಪತಿ ಬೆಳೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಭೋಪಾಲ್’ನ ಸಂಕಲ್ಪ ಹಾಗೂ ರಾಣಿ ಪರಿಹಾರ್ ದಂಪತಿ ತಮ್ಮ ತೋಟದಲ್ಲಿ ಮಿಯಾಜಾಕಿ ತಳಿಯ ಅಪರೂಪದ ಮಾವು ಬೆಳೆದಿದ್ದಾರೆ. ಇವರು ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ತೋಟದಲ್ಲಿ ಎರಡು ಸಸಿ ನೆಟ್ಟಿದ್ದರು. ಅವು ಇದೀಗ ಫಲ ಕೊಡುತ್ತಿದ್ದು, ಇದರ ರಕ್ಷಣೆಗಾಗಿ ನಾಲ್ಕು ನಾಯಿ ಹಾಗೂ ಆರು ಕಾವಲುಗಾರರನ್ನು ನೇಮಿಸಿದ್ದಾರೆ.
ಕಳೆದ ವರ್ಷ ಈ ಮಾವಿನ ಹಣ್ಣು ವಿಶ್ವದ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಸಾಮಾನ್ಯವಾಗಿ ವಿದೇಶಗಳಲ್ಲಿ ಈ ಮಾವಿನಹಣ್ಣನ್ನು ಉಡುಗೊರೆಯಾಗಿ ನೀಡುವ ಪರಿಪಾಠವಿದೆ.

ಬೇಬಿ ಫುಡ್ ತಯಾರಿಕೆ ಉದ್ಯಮದಲ್ಲಿ ಯಶಸ್ಸು ಕಂಡ ಜ್ಯೋತಿಶ್ರೀ

ಉದ್ಯೋಗ ಬಿಟ್ಟು ತೆಂಗಿನ ಚಿಪ್ಪಿನ ಉತ್ಪನ್ನದ ಉದ್ಯಮ ಆರಂಭಿಸಿದ ಕೇರಳದ ಮಹಿಳೆ

ಲೈಂಗಿಕ ಕಿರುಕುಳ ಆರೋಪ: ಸ್ವಯಂ ಘೋಷಿತ ದೇವಮಾನವ ಶಿವಶಂಕರ್ ಬಾಬಾ ಬಂಧನ

ಕೋವಿಡ್’ನಿಂದ ವಂಡಲೂರು ಮೃಗಾಲಯದ ಹೆಣ್ಣು ಸಿಂಹ ಸಾವು

ಮಲೆನಾಡು, ಕರಾವಳಿಯಲ್ಲಿ‌ ಭಾರೀ ಮಳೆ, ವಿದ್ಯುತ್ ವ್ಯತ್ಯಯ, ಆನ್’ಲೈನ್ ವಿದ್ಯಾರ್ಥಿಗಳ ಪರದಾಟ

‘ಆರ್ಯ ಸುಮಂತ’ ಖ್ಯಾತಿಯ ಹಿರಿಯ ನಟ ಚಂದ್ರಶೇಖರ್ ನಿಧನ

ವೆಬ್ ಸಿರೀಸ್’ಗೆಂದು ಚಿತ್ರೀಕರಣ: ಪೋರ್ನ್ ಸೈಟ್’ನಲ್ಲಿ ರಿಲೀಸ್, ದೂರು ನೀಡಿದ ಮಾಡೆಲ್

ಸಹಕಾರ ಬ್ಯಾಂಕಿಗೆ ವಂಚನೆ: ಇಡಿಯಿಂದ ಮಾಜಿ ಶಾಸಕನ ಬಂಧನ

ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ

ಡಿಎಪಿ ರಸಗೊಬ್ಬರ ಖರೀದಿ ಮೇಲಿನ ಸಬ್ಸಿಡಿ ದರ ಹೆಚ್ಚಳ

ಗಡುವು ಮುಗಿದರೂ ಆಸ್ತಿ ವಿವರ ಸಲ್ಲಿಸದ ಶಿಲ್ಪಾ ನಾಗ್

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!