ವಿಶ್ವಸಂಸ್ಥೆ: ಹೊಸ ವರ್ಷದ ಮೊದಲ ದಿನ ಜಗತ್ತಿನಲ್ಲಿ 3,92,078 ಮಕ್ಕಳು ಜನಿಸಿದ್ದಾರೆ. ಭಾರತದಲ್ಲೇ 67,385 ಮಕ್ಕಳು ಜನಿಸಿವೆ.
ಪೆಸಿಫಿಕ್ನ ಫಿಜಿಯಲ್ಲಿ 2020ರ ಮೊದಲ ದಿನದ ಮೊದಲ ಮಗು ಮತ್ತು ಅಮೆರಿಕದಲ್ಲಿ ಕೊನೆಯ ಮಗು ಜನಿಸಿದೆ.
ಇಂತಹದೊಂದು ಮಾಹಿತಿಯನ್ನು ಯುನಿಸೆಫ್ ಬಹಿರಂಗಪಡಿಸಿದೆ. 2020ರ ಜನವರಿ 1ರಂದು ಜಗತ್ತಿನ ವಿವಿಧ ದೇಶಗಳಲ್ಲಿನ ಮಕ್ಕಳ ಜನನ ಪ್ರಮಾಣದ ಮೇಲೆ ಯುನಿಸೆಫ್ ಬೆಳಕು ಚೆಲ್ಲಿದೆ.
ಇನ್ನು ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದಲ್ಲಿ 46,299 ಮಕ್ಕಳ ಜನನವಾಗಿದೆ ಎಂದು ಯುನಿಸೆಫ್ ಹೇಳಿದೆ.
ಭಾರತ, ಚೀನಾ ಬಿಟ್ಟರೆ ನೈಜೀರಿಯಾದಲ್ಲಿ 26,039, ಪಾಕಿಸ್ತಾನದಲ್ಲಿ 16,787, ಇಂಡೋನೇಷ್ಯಾದಲ್ಲಿ 13,020, ಅಮೆರಿಕದಲ್ಲಿ 10,452, ಕಾಂಗೋ ರಿಪಬ್ಲಿಕ್ನಲ್ಲಿ 10,247, ಇಥಿಯೋಪಿಯಾದಲ್ಲಿ 8,493 ಮಕ್ಕಳು ಜನಿಸಿವೆ.
2027ರ ವೇಳೆಗೆ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. ಒಂದು ನಿರೀಕ್ಷೆಯ ಪ್ರಕಾರ 2019 ಮತ್ತು 2050ರ ವೇಳೆಗೆ ಭಾರತದ ಜನಸಂಖ್ಯೆ 27.3 ಕೋಟಿ ಹೆಚ್ಚಾಗಲಿದೆ. ನೈಜೀರಿಯಾದ ಜನಸಂಖ್ಯೆ ಇದೇ ಸಂದರ್ಭದಲ್ಲಿ 20 ಕೋಟಿ ಹೆಚ್ಚಾಗಲಿದೆ. ಜಾಗತಿಕ ಜನಸಂಖ್ಯೆ ಹೆಚ್ಚಳಕ್ಕೆ ಈ ಎರಡು ರಾಷ್ಟ್ರಗಳ ಪಾಲು ಶೇಕಡ 23 ಆಗಿರಲಿದೆ ಎಂದು ಯುನಿಸೆಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹೆನ್ರಿಟಾ ಫೋರೆ ತಿಳಿಸಿದ್ದಾರೆ.
2020; ಫಿಜಿಯಲ್ಲಿ ವಿಶ್ವದ ಮೊದಲ ಮಗು ಜನನ!
Follow Us