Wednesday, July 6, 2022

ಬೆಂಗಳೂರಲ್ಲಿ 2,208, ರಾಜ್ಯದಲ್ಲಿ 3,693 ಮಂದಿಗೆ ಸೋಂಕು, 115 ಜನ ಸಾವು

Follow Us

* ರಾಜಧಾನಿಯಲ್ಲಿ 75 ಮಂದಿ ಬಲಿ, ಸಾವಿನ ಸಂಖ್ಯೆ 1,147ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 115 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,147ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 75 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 115 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದಾಗಿ ಬಲಿಯಾದವರ ಸಂಖ್ಯೆ 582ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,208 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 3,693 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55,115ಕ್ಕೇರಿಕೆಯಾಗಿದೆ. ರಾಜಧಾನಿಯಲ್ಲಿ ಚೇತರಿಕೆ ಪ್ರಮಾಣ ಶೇ.22.,88 ರಷ್ಟಿದ್ದು ಸಾವಿನ ಪ್ರಮಾಣ ಶೇ.2.04 ರಷ್ಟಿದೆ. ರಾಜ್ಯದಲ್ಲಿ ಇದುವರೆಗೂ 9.50,177 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ 338 ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.‌ ಈ ಮೂಲಕ ಸಕ್ರಿಯ 20,623 ಕೊರೋನಾ ಸೋಂಕಿತರಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ 24,700 ಮಂದಿಗೆ ಕೊರೋನಾ ಪರಿಕ್ಷೆ ನಡೆಸಲಾಗಿತ್ತು. ಈ ಪೈಕಿ 3693 ಮಂದಿಗೆ ಸೋಂಕು ಹೊಸದಾಗಿ ಪತ್ತೆಯಾಗಿದೆ. ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ 37.66 ರಷ್ಟಿದ್ದು ಮರಣ ಪ್ರಮಾಣ ಶೇ. 2.05 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಜಿಲ್ಲಾವಾರು ಸೋಂಕಿತರ ಸಂಖ್ಯೆ ಈ ರೀತಿ ಇದೆ. ಒಂದು ದಿನದ ವಿವರ ಹಾಗೂ ಒಟ್ಟಾರೆ ಸೋಂಕಿತರು
ಬೆಂಗಳೂರು ನಗರ 2208 (ಒಟ್ಟೂ 27,496)
ಧಾರವಾಡ 157 (1731)
ಬಳ್ಳಾರಿ 133 (2200)
ವಿಜಯಪುರ 118 (1238)
ಬೆಳಗಾವಿ 95 (789)
ಮೈಸೂರು 93 (1413)
ಕಲಬುರಗಿ 89 (2592)
ಉಡುಪಿ 80 (1980)
ಉತ್ತರ ಕನ್ನಡ 75 (900)
ಬೀದರ್‌ 69 (1260)
ಗದಗ 59 (473)
ಹಾವೇರಿ 58 (389)
ಕೋಲಾರ 51 (426)
ದಕ್ಷಿಣ ಕನ್ನಡ 39 (2797)
ತುಮಕೂರು 36 (600)
ರಾಯಚೂರು 33 (948)
ಬೆಂಗಳೂರು ಗ್ರಾಮಾಂತರ 33 (473)
ದಾವಣಗೆರೆ 31 (689)
ಚಿಕ್ಕಬಳ್ಳಾಪುರ 31 (598)
ಕೊಪ್ಪಳ 30 (419)
ಬಾಗಲಕೋಟೆ 29 (616)
ಚಿಕ್ಕಮಗಳೂರು 28 (228)
ಚಿತ್ರದುರ್ಗ 24 (178)
ಮಂಡ್ಯ 22 (820)
ಹಾಸನ 21 (791)
ರಾಮನಗರ 14 (410)
ಕೊಡಗು 13 (249)
ಶಿವಮೊಗ್ಗ 10 (615)
ಚಾಮರಾಜನಗರ 10 (222)
ಯಾದಗಿರಿ 4 (1539)

ಮತ್ತಷ್ಟು ಸುದ್ದಿಗಳು

vertical

Latest News

ಬೆಂಗಳೂರಿನಲ್ಲಿ 1,053 ಸೇರಿ ರಾಜ್ಯದಲ್ಲಿ 1,127 ಮಂದಿಗೆ ಕೊರೋನಾ ಸೋಂಕು

newsics.com ಬೆಂಗಳೂರು; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,127 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,75,000ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...

ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

newsics.com ನವದೆಹಲಿ; ರಾಜ್ಯಸಭೆಗೆ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್​ ಪಿಟಿ ಉಷಾ ಹಾಗೂ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್  ನಾಮ ನಿರ್ದೇಶನಗೊಂಡಿದ್ದಾರೆ. https://twitter.com/narendramodi/status/1544693793240322049?t=2u64d_ttEmETQgNsb5Joxg&s=19 ನಾಲ್ವರ ಫೋಟೋ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ...

ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತ

newsics.com ಧಾರವಾಡ; ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತವಾಗಿದೆ. ನಿಡಸೋಶಿಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಸ್ವಾಮೀಜಿಗಳು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ತಾಲೂಕಿನ ತೇಗೂರ ಬಳಿ ಕಾರು...
- Advertisement -
error: Content is protected !!