ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಈ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದು, ಗುರುವಾರ 6,128 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ಕ್ಕೆ ಏರಿಕೆಯಾಗಿದೆ. ಗುರುವಾರ ಬೆಂಗಳೂರಿನಲ್ಲಿ 2233 ಮಂದಿಗೆ ಸೋಂಕು ತಗುಲಿದೆ.
ಬೆಂಗಳೂರಿನಲ್ಲಿಯೇ ಗುರುವಾರ 22 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 1009 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ 83 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ. ಇನ್ನೂ ಕೊರೋನಾ ಸೋಂಕಿತರಾದ 620 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರ 2233, ಮೈಸೂರು, 430, ಬಳ್ಳಾರಿ – 343, ಉಡುಪಿ – 248, ಬೆಂಗಳೂರು ಗ್ರಾಮಾಂತರ – 224, ಕಲಬುರ್ಗಿ – 220, ಬೆಳಗಾವಿ – 202, ದಕ್ಷಿಣ ಕನ್ನಡ – 198, ಧಾರವಾಡ – 180, ರಾಯಚೂರು – 166, ಶಿವಮೊಗ್ಗ – 143, ಬಾಗಲಕೋಟೆ ಮತ್ತು ಚಿಕ್ಕಮಗಳೂರು – 126, ವಿಜಯಪುರ – 124, ಉತ್ತರ ಕನ್ನಡ – 120, ರಾಮನಗರ – 106, ತುಮಕೂರು – 104, ಹಾಸನ – 94, ಗದಗ – 88, ಮಂಡ್ಯ – 87, ದಾವಣಗೆರೆ – 86, ಚಿಕ್ಕಬಳ್ಳಾಪುರ – 82, ಕೊಪ್ಪಳ – 78, ಬೀದರ್ – 69, ಯಾದಗಿರಿ ಮತ್ತು ಹಾವೇರಿ – 58, ಚಿತ್ರದುರ್ಗ – 47, ಕೋಲಾರ ಮತ್ತು ಚಾಮರಾಜನಗರ – 32 ಹಾಗೂ ಕೊಡಗು – 24 ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗುವ ಮೂಲಕ, ಇಂದು ಒಟ್ಟು 6,128 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ ಸೋಂಕಿತರಾದಂತ 46,694 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 69,700 ರಷ್ಟಿದೆ.
ಬೆಂಗಳೂರಲ್ಲಿ 2233, ರಾಜ್ಯದಲ್ಲಿ 6,128 ಮಂದಿಗೆ ಸೋಂಕು, 83 ಜನ ಬಲಿ
Follow Us