newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 27,156 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 14 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್ ಸೋಮವಾರ ಟ್ವಿಟ್ ಮಾಡಿ ಬೆಂಗಳೂರಿನಲ್ಲಿ 15,947 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಐವರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.12.54ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,17,297ಕ್ಕೆ ಏರಿಕೆಯಾಗಿದೆ. ಒಂದೇ ದಿನ 7827 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಹೊಸದಾಗಿ 15,947 ಜನರಿಗೆ ಸೋಂಕು ತಗುಲಿದ್ದು, 5 ಜನ ಸೋಂಕಿತರು ಮೃತಪಟ್ಟಿದ್ದಾರೆ. 4888 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,57,254 ಸಕ್ರಿಯ ಪ್ರಕರಣಗಳಿವೆ.
ಬಳ್ಳಾರಿ 560, ಬೆಂಗಳೂರು ಗ್ರಾಮಾಂತರ 538, ದಕ್ಷಿಣಕನ್ನಡ 490, ಧಾರವಾಡ 784, ಹಾಸನ 1050, ಮಂಡ್ಯ 917, ಮೈಸೂರು 1770, ತುಮಕೂರು 1147 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.
ಬೆಂಗಳೂರು ನಗರ 5, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 1, ದಕ್ಷಿಣ ಕನ್ನಡ 3, ಧಾರವಾಡ 1, ಕಲ್ಬುರ್ಗಿ 1, ರಾಮನಗರ 1, ತುಮಕೂರು 1 ಸೇರಿ 14 ಜನ ಸೋಂಕಿತರು ಅಸುನೀಗಿದ್ದಾರೆ.
https://newsics.com/news/india/demonstration-by-75-aircraft-on-republic-day/99121/
ಅಬುಧಾಬಿ ತೈಲ ಸಂಗ್ರಹಾಗಾರದ ಮೇಲೆ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು
ಕೊರೋನಾ ಆರ್ಭಟ: ಎರಡೇ ವರ್ಷದಲ್ಲಿ 358 ಕೋಟಿ ಡೋಲೊ-650 ಮಾತ್ರೆ ಮಾರಾಟ!