Monday, November 29, 2021

ಭಾರತದ ಕೋವಿಡ್ ಲಸಿಕೆ ಪ್ರಮಾಣಪತ್ರಕ್ಕೆ 30 ದೇಶಗಳ ಮಾನ್ಯತೆ

Follow Us

newsics.com
ನವದೆಹಲಿ: ಜಗತ್ತಿನ‌ 30 ದೇಶಗಳು ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರ ನೀಡಲು ಸಮ್ಮತಿಸಿವೆ‌.

ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ಭಾರತ ನಡೆಸುತ್ತಿದ್ದು, 30 ವಿವಿಧ ರಾಷ್ಟ್ರಗಳು ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡಲು ಒಪ್ಪಿವೆ.
ಯುಕೆ, ಫ್ರಾನ್ಸ್, ಜರ್ಮನಿ, ನೇಪಾಳ, ಲೆಬೆನಾನ್, ಅಮೆರಿಕ, ಉಕ್ರೇನ್, ಬೆಲ್ಜಿಯಂ, ಹಂಗೇರಿ, ಸೈಬಿರಿಯಾ ಸೇರಿದಂತೆ 30 ವಿವಿಧ ರಾಷ್ಟ್ರಗಳು ಕೋವಿಡ್ ಲಸಿಕಾ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡಲು ಸಮ್ಮತಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆ ಪ್ರಮಾಣ ಪತ್ರಕ್ಕೆ ಇರಾನ್, ಮೆಕ್ಸಿಕೋ, ಜಿಂಬಾಬ್ವೆ, ಫಿಲಿಫೈನ್ಸ್ ಸೇರಿದಂತೆ 11 ದೇಶಗಳು ಒಪ್ಪಿಗೆ ನೀಡಿವೆ. ಜರ್ಮನಿ, ಎಸ್ಟೋನಿಯಾ, ಗ್ರೀಸ್, ಬೆಲಾರಸ್, ಹಂಗೇರಿ, ಲೆಬನಾನ್ ದೇಶಗಳಲ್ಲಿ ಪ್ರಯಾಣದ ಉದ್ದೇಶಗಳಿಗಾಗಿ ಕೊವ್ಯಾಕ್ಸಿನ್ ಲಸಿಕೆ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡಲಾಗಿದೆ.

ಗುರುವಾರ(ಅ.14)ದವರೆಗೆ ಭಾರತದಲ್ಲಿ 97 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಗುರುವಾರ ಒಂದೇ ದಿನ 27 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ‌.

ವಿಶ್ವವಿಖ್ಯಾತ ಜಂಬೂಸವಾರಿಗೆ ಸಕಲ ಸಿದ್ಧತೆ, ನಾಳೆ ಸಂಜೆ ನಾಡದೇವಿಯ ಮೆರವಣಿಗೆ

ಭೂಮಿ ತಲುಪಿದ ಸೌರವ್ಯೂಹದಿಂದಾಚೆಗಿನ ರೇಡಿಯೋ ಸಂದೇಶ!

ಆರು ಕಾಲಿನ ಎರಡು ತಲೆಯ ಆಮೆ ಜನನ!

ಮತ್ತಷ್ಟು ಸುದ್ದಿಗಳು

Latest News

ಅಂತ್ಯಕ್ರಿಯೆ ನಡೆಸುವುದನ್ನೇ ಮರೆತ ಬಿಬಿಎಂಪಿ: 15 ತಿಂಗಳ ಬಳಿಕ ಪತ್ತೆಯಾಯ್ತು 2 ಕೋವಿಡ್ ಶವ!

newsics.com ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಇಬ್ಬರ ಶವಸಂಸ್ಕಾರ ಮಾಡುವುದನ್ನೇ ಮರೆತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, 15 ತಿಂಗಳ ಬಳಿಕ ಎರಡು ಶವಗಳನ್ನು ಹೊರಕ್ಕೆ ತಂದ...

ಕೃಷ್ಣನ ವಿಗ್ರಹ ಸ್ಥಾಪನೆ ಹೇಳಿಕೆ: ಮಥುರಾದಲ್ಲಿ ನಿಷೇಧಾಜ್ಞೆ

newsics.com ಮಥುರಾ(ಉತ್ತರ ಪ್ರದೇಶ): ಕೃಷ್ಣನ ಜನ್ಮಸ್ಥಾನ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ದೇವಾಲಯದ ಹತ್ತಿರವೇ ಮಸೀದಿ ಇದ್ದು,...

ತಿರುಮಲ ತಿರುಪತಿ ದೇವಸ್ಥಾನಮ್’ನ ಒಎಸ್’ಡಿ ಡಾಲರ್ ಶೇಷಾದ್ರಿ ನಿಧನ

newsics.com ವಿಶಾಖಪಟ್ಟಣಂ: ತಿರುಮಲ ತಿರುಪತಿ ದೇವಸ್ಥಾನಮ್ ನ ಪ್ರಧಾನ ಅರ್ಚಕ ಡಾಲರ್ ಶೇಷಾದ್ರಿ ನಿಧನರಾದರು. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು...
- Advertisement -
error: Content is protected !!