ನವದೆಹಲಿ: ಬ್ರೈನ್ ಟ್ಯೂಮರ್ ನ ಕೊನೇ ಹಂತದಲ್ಲಿರುವ ಗುಜರಾತ್ ಸೂರತ್ ನ 27 ವರ್ಷದ ಶ್ರುಚಿ ವಾಡಲಿಯಾ ಈಗ ಪರಿಸರ ಸಂರಕ್ಷಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಹೆಚ್ಚು ದಿನ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ ಮೇಲೂ ಧೃತಿಗೆಡದೆ ಕಳೆದೆರಡು ವರ್ಷಗಳಿಂದ 30 ಸಾವಿರ ಗಿಡ ನೆಟ್ಟಿದ್ದಾರೆ. ಶಾಲೆಗಳಿಗೆ ತೆರಳಿ ಅಲ್ಲಿನವರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಮರಗಿಡಗಳ ನಾಶದಿಂದ ಪರಿಸರ ಮಾಲಿನ್ಯ ದಿನೇದಿನೆ ಹೆಚ್ಚುತ್ತಿರುವುದರಿಂದಲೇ ಮಾರಣಾಂತಿಕ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗಿದೆ. ‘ನಾನು ಇನ್ನೇನು ಕೆಲವೇ ದಿನಗಳಲ್ಲಿ ಸಾಯಬಹುದು. ಆದರೆ ನಾನು ನೆಟ್ಟಿರುವ ಮರಗಿಡಗಳ ಮೂಲಕ ಜನರ ಉಸಿರಾಗಿ ಇರುತ್ತೇನೆ’ ಎಂದು ಶ್ರುಚಿ ಹೇಳಿದ್ದಾರೆ. ಇನ್ಯಾರಿಗೂ ಬರುವುದು ಬೇಡ ಎಂಬುದೇ ನನ್ನ ಆಶಯ. ಮರಗಿಡಗಳು ಪರಿಸರವನ್ನು ಸ್ವಚ್ಛವಾಗಿಡುತ್ತವೆ, ಕ್ಯಾನ್ಸರ್, ಬ್ರೇನ್ ಟ್ಯೂಮರ್ನಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯುತ್ತವೆ ಎಂದು ಹೇಳಿದ್ದಾರೆ.