ನವದೆಹಲಿ: ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಗಗನಯಾನದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ನಲ್ಲಿ ಬರೋಬ್ಬರಿ 328 ದಿನ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಕಳೆದಿದ್ದು, ಇದೀಗ ಭೂಮಿಗೆ ಬಂದಿದ್ದಾರೆ.
ಬಾಹ್ಯಾಕಾಶದಲ್ಲಿ 328 ದಿನ ಕಳೆದ ಕ್ರಿಸ್ಟಿನಾ ಕೋಚ್, ಈ ಹಿಂದೆ ಈ ಸಾಧನೆ ಮಾಡಿದ್ದ ನಾಸಾದ ಪೆಗ್ಗಿ ವಿಟ್ಸನ್ ಅವರ ದಾಖಲೆ ಮುರಿದಿದ್ದಾರೆ. 2019ರ ಡಿಸೆಂಬರ್ನ 28ರಲ್ಲಿ ನಾಸಾದ ಪೆಗ್ಗಿ ವಿಟ್ಸನ್ 289 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದರು.
ಅಲ್ಲದೇ ಸ್ಪೇಸ್ ವಾಕ್( ಬಾಹ್ಯಾಕಾಶ ನಡಿಗೆ) ಮಾಡಿದ ಕೀರ್ತಿ ಕೂಡ ಕ್ರಿಸ್ಟಿನಾ ಕೋಚ್ ಅವರಿಗೆ ಸಲ್ಲುತ್ತೆ.
ಕ್ರಿಸ್ಟಿನಾ ಬಾಹ್ಯಾಕಾಶದಲ್ಲಿರುವ ಮನುಷ್ಯ ಹಾಗೂ ಗುರುತ್ವಾಕರ್ಷಣೆ ಬಗ್ಗೆ ಸಂಶೋಧಿಸಿದ್ದಾರೆ.
328 ದಿನ ಬಾಹ್ಯಾಕಾಶದಲ್ಲಿ ರಿಸರ್ಚ್; ದಾಖಲೆ ಬರೆದ ಮಹಿಳಾ ಗಗನಯಾತ್ರಿ
Follow Us