newsics.com
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ 9,464 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,40,411ಕ್ಕೆ ಏರಿಕೆಯಾಗಿದೆ.
ರಾಜ್ಯಾದ್ಯಂತ 130 ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 7,067ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಶುಕ್ರವಾರ 3426 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 163631 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 30 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 2370 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 3,34,99 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದರಿಂದ ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 98,326 ಆಗಿದೆ.
ಬಾಗಲಕೋಟೆ 188, ಬಳ್ಳಾರಿ – 382, ಬೆಳಗಾವಿ – 244, ಬೆಂಗಳೂರು ಗ್ರಾಮಾಂತರ – 146, ಬೆಂಗಳೂರು ನಗರ – 3426, ಬೀದರ್ – 61, ಚಾಮರಾಜನಗರ – 45, ಚಿಕ್ಕಬಳ್ಳಾಪುರ – 131, ಚಿಕ್ಕಮಗಳೂರು – 89, ಚಿತ್ರದುರ್ಗ – 247, ದಕ್ಷಿಣ ಕನ್ನಡ – 446, ದಾವಣಗೆರೆ – 297, ಧಾರವಾಡಿ – 203, ಗದಗ – 195, ಹಾಸನ – 305, ಹಾವೇರಿ – 240, ಕಲಬುರ್ಗಿ – 261, ಕೊಡಗು – 18, ಕೋಲಾರ – 70, ಕೊಪ್ಪಳ – 171, ಮಂಡ್ಯ – 131, ಮೈಸೂರು – 676, ರಾಯಚೂರು – 200, ರಾಮನಗರ – 76, ಶಿವಮೊಗ್ಗ – 349, ತುಮಕೂರು – 395, ಉಡುಪಿ – 168, ಉತ್ತರ ಕನ್ನಡ – 114, ವಿಜಯಪುರ – 92 ಮತ್ತು ಯಾದಗಿರಿ – 98 ಸೇರಿದಂತೆ ಒಟ್ಟು 9,464 ಜನರಿಗೆ ಕೊರೋನಾ ಸೋಂಕು ತಗುಲಿದೆ.
ಬೆಂಗಳೂರಿನಲ್ಲಿ 3426, ರಾಜ್ಯದಲ್ಲಿ 9,464 ಜನರಿಗೆ ಕೊರೋನಾ, 130 ಬಲಿ
Follow Us