newsics.com
ಬೆಂಗಳೂರು: ರಾಜ್ಯದಲ್ಲಿ ಶನಿವಾರವೂ ಕೊರೋನಾ ಸ್ಪೋಟ ಉಂಟಾಗಿದೆ. ಶನಿವಾರ 9,140 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,49,551ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ 94 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 7,161ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಶನಿವಾರ 3,552 ಜನರಿಗೆ ಕೊರೋನಾ ಸೋಂಕು ತಗುಲಿದೆ. 21 ಬಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 3538 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಇದುವರೆಗೆ 123862 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 40929 ಸಕ್ರಿಯ ಪ್ರಕರಣಗಳಿದೆ.
ರಾಜ್ಯದಲ್ಲಿ ಇದುವರೆಗೆ 3,44,556 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 97,815 ಸಕ್ರಿಯ ಸೋಂಕಿತರಿದ್ದಾರೆ.
ಬಾಗಲಕೋಟೆ – 175, ಬಳ್ಳಾರಿ – 366, ಬೆಳಗಾವಿ – 201, ಬೆಂಗಳೂರು ಗ್ರಾಮಾಂತರ – 211, ಬೆಂಗಳೂರು ನಗರ – 3,552, ಬೀದರ್ – 101, ಚಾಮರಾಜನಗರ – 60, ಚಿಕ್ಕಬಳ್ಳಾಪುರ – 101, ಚಿಕ್ಕಮಗಳೂರು – 159, ಚಿತ್ರದುರ್ಗ – 227, ದಕ್ಷಿಣಕನ್ನಡ – 401, ದಾವಣಗೆರೆ – 267, ಧಾರವಾಡ – 239, ಗದಗ – 49, ಹಾಸನ – 324, ಹಾವೇರಿ – 213, ಕಲಬುರ್ಗಿ – 222, ಕೊಡಗು – 27, ಕೋಲಾರ – 53, ಕೊಪ್ಪಳ – 183, ಮಂಡ್ಯ – 193, ಮೈಸೂರು – 637, ರಾಯಚೂರು – 131, ರಾಮನಗರ – 81, ಶಿವಮೊಗ್ಗ – 155, ತುಮಕೂರು – 304, ಉಡುಪಿ – 169, ಉತ್ತರ ಕನ್ನಡ – 130, ವಿಜಯಪುರ – 58 ಮತ್ತು ಯಾದಗಿರಿ – 151 ಸೇರಿದಂತೆ ಒಟ್ಟು 9,140 ಜನರಿಗೆ ಕೊರೋನಾ ಸೋಂಕು ತಗುಲಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ ಐವರು ಪತ್ರಕರ್ತರು ಕೊರೋನಾಕ್ಕೆ ಬಲಿ
ಪ್ರಾಣಿಗಳ ಮೇಲೆ ಕೊವಾಕ್ಸಿನ್ ಲಸಿಕೆಯ ಯಶಸ್ವಿ ಪ್ರಯೋಗ