newsics.com
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಸ್ಪೋಟವಾಗಿದ್ದು, ಶುಕ್ರವಾರ 8626 ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 394026 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಶುಕ್ರವಾರ 179 ಜನರು ಬಲಿಯಾಗಿದ್ದು, ಈ ಮೂಲಕ ಕೊರೋನಾ ಸಾವಿನ ಸಂಖ್ಯೆ 7808ಕ್ಕೇರಿದೆ.
ಬೆಂಗಳೂರಿನಲ್ಲಿ ಶುಕ್ರವಾರ 3623 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈಗ ನಗರದಲ್ಲಿ 187705 ಸೋಂಕಿತರಿದ್ದಾರೆ. ಶುಕ್ರವಾರ 37 ಸೋಂಕಿತರು ಬಲಿಯಾಗಿದ್ದು, ಈವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2592 ಕ್ಕೆ ಏರಿಕೆಯಾಗಿದೆ
ರಾಜ್ಯದಲ್ಲಿ ಶುಕ್ರವಾರ 10949 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ 394026 ಜನರು ಡಿಸ್ಚಾರ್ಜ್ ಆಗಿದ್ದಾರೆ. ಐಸಿಯುನಲ್ಲಿ 814 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 3623, ರಾಜ್ಯದಲ್ಲಿ 8626 ಮಂದಿಗೆ ಸೋಂಕು, 179 ಬಲಿ
Follow Us