Thursday, December 7, 2023

ಬೆಂಗಳೂರಿನಲ್ಲಿ 3733, ರಾಜ್ಯದಲ್ಲಿ 8364 ಮಂದಿಗೆ ಸೋಂಕು, 114 ಬಲಿ

Follow Us

newsics.com
ಬೆಂಗಳೂರು: ರಾಜ್ಯದಲ್ಲಿ ಶನಿವಾರ 8,364 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶನಿವಾರ ರಾಜ್ಯಾದ್ಯಂತ ಒಟ್ಟು 114 ಸೋಂಕಿತರು ಕೊರೋನಾ ಸೋಂಕಿನಿಂದ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 7922ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಇಂದು 33 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 3733 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಈವರೆಗೆ 4,04,841 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಕಾರಣ, ರಾಜ್ಯದಲ್ಲಿ 98,564 ಸಕ್ರಿಯ ಸೋಂಕಿತರಿದ್ದಾರೆ ಎಂಬುದಾಗಿ ತಿಳಿಸಿದೆ.
ಬಾಗಲಕೋಟೆ – 152, ಬಳ್ಳಾರಿ – 300, ಬೆಳಗಾವಿ – 100, ಬೆಂಗಳೂರು ಗ್ರಾಮಾಂತರ – 189, ಬೆಂಗಳೂರು ನಗರ – 3733, ಬೀದರ್ – 23, ಚಾಮರಾಜನಗರ – 72, ಚಿಕ್ಕಬಳ್ಳಾಪುರ – 89, ಚಿಕ್ಕಮಗಳೂರು – 165, ಚಿತ್ರದುರ್ಗ – 84, ದಕ್ಷಿಣ ಕನ್ನಡ – 432, ದಾವಣಗೆರೆ – 163, ಧಾರವಾಡ – 264, ಗದಗ – 391, ಹಾಸನ – 19, ಹಾವೇರಿ – 107, ಕಲಬುರ್ಗಿ – 110, ಕೊಡಗು – 38, ಕೋಲಾರ – 91, ಕೊಪ್ಪಳ – 96, ಮಂಡ್ಯ – 94, ಮೈಸೂರು – 626, ರಾಯಚೂರು – 156, ರಾಮನಗರ – 47, ಶಿವಮೊಗ್ಗ – 106, ತುಮಕೂರು – 159, ಉಡುಪಿ – 215, ಉತ್ತರ ಕನ್ನಡ – 129, ವಿಜಯಪುರ – 87 ಮತ್ತು ಯಾದಗಿರಿ – 127 ಕೊರೋನಾ ಪ್ರಕರಣ ಸೇರಿದಂತೆ ಒಟ್ಟು 8364 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!