Wednesday, May 25, 2022

ಬೆಂಗಳೂರಿನಲ್ಲಿ 3733, ರಾಜ್ಯದಲ್ಲಿ 6974 ಮಂದಿಗೆ ಕೊರೋನಾ, 83 ಜನರು ಸಾವು

Follow Us

newsics.com
ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 6974 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 533850 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 3733 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾಗೆ ರಾಜ್ಯದಲ್ಲಿ ಮಂಗಳವಾರ 83 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 8228 ಕ್ಕೇರಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಂದು 26 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2715 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಂದೇ ದಿನ 10,815 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಐಸಿಯುನಲ್ಲಿ 822 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ 152, ಬಳ್ಳಾರಿ-300, ಬೆಳಗಾವಿ 100, ಬೆಂಗಳೂರು ಗ್ರಾಮಾಂತರ-189, ಬೆಂಗಳೂರು ನಗರ 3733, ಬೀದರ್-23, ಚಾಮರಾಜನಗರ 72, ಚಿಕ್ಕಬಳ್ಳಾಪುರ 89, ಚಿಕ್ಕಮಗಳೂರು 165, ಚಿತ್ರದುರ್ಗ 84, ದಕ್ಷಿಣ ಕನ್ನಡ 432, ದಾವಣಗೆರೆ 163, ಧಾರವಾಡ 264, ಗದಗ 391, ಹಾಸನ 19, ಹಾವೇರಿ107, ಕಲಬುರಗಿ 110, ಕೊಡಗು 38, ಕೋಲಾರ 91, ಕೊಪ್ಪಳ 96, ಮಂಡ್ಯ 94, ಮೈಸೂರು 62, ರಾಯಚೂರು 156, ರಾಮನಗರ 47, ಶಿವಮೊಗ್ಗ 106, ತುಮಕೂರು 159, ಉಡುಪಿ 215, ಉತ್ತರ ಕನ್ನಡ 129, ವಿಜಯಪುರ 87, ಯಾದಗಿರಿಯಲ್ಲಿ 127 ಮಂದಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ರಾಜಸ್ಥಾನ ತಂಡವನ್ನು ಮಣಿಸಿ ಫೈನಲ್ಸ್ ಗೆ ಎಂಟ್ರಿಕೊಟ್ಟ ಗುಜರಾತ್

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2022ರ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ಸ್...

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ. ಇದೀಗ ಆ ಮಗು ಆತನದ್ದೇ ಎಂದು...

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...
- Advertisement -
error: Content is protected !!