Wednesday, June 16, 2021

ರಾಜ್ಯದಲ್ಲಿ 4,169 ಮಂದಿಗೆ ಸೋಂಕು, 104 ಜನ ಬಲಿ

♦ ಬೆಂಗಳೂರಲ್ಲಿ 2344 ಮಂದಿಗೆ ಸೋಂಕು, 70 ಸಾವು

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಕೊರೋನಾ ಹೊಸ ದಾಖಲೆ ಬರೆದಿದೆ. ಈ ಹಿಂದಿನ ದಾಖಲೆಯನ್ನೆಲ್ಲ ಮುರಿದಿರುವ ಕೊರೋನಾ ಗುರುವಾರ ರಾಜ್ಯದಲ್ಲಿ 4,169 ಜನರಿಗೆ ಕೊರೋನಾ ಸೋಂಕು ತಗುಲಿದೆ. 104 ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ 2,344 ಜನರಿಗೆ ಕೊರೋನಾ ಸೋಂಕು ತಗುಲಿದೆ. 70 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 497 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ 18,828 ಸಕ್ರಿಯ ಕೊರೋನಾ ಸೋಂಕಿತರಿದ್ದಾರೆ.
ರಾಜ್ಯದಲ್ಲಿ ಗುರುವಾರ 4,169 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 1,263 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 30,655ಕ್ಕೆ ತಲುಪಿದೆ. ಬೆಂಗಳೂರು ನಗರ – 2344, ದಕ್ಷಿಣ ಕನ್ನಡ – 238, ಧಾರವಾಡ – 176, ವಿಜಯಪುರ – 144, ಮೈಸೂರು – 130, ಕಲಬುರಗಿ – 123, ಉಡುಪಿ – 113, ರಾಯಚೂರು – 101, ಬೆಳಗಾವಿ – 92, ಉತ್ತರ ಕನ್ನಡ – 79, ಚಿಕ್ಕಬಳ್ಳಾಪುರ – 77, ಬೀದರ್ – 53, ಶಿವಮೊಗ್ಗ – 46, ಬಳ್ಳಾರಿ – 44, ಗದಗ – 44, ಕೋಲಾರ – 43, ಬಾಗಲಕೋಟೆ – 39, ಯಾದಗಿರಿ – 34, ಕೊಪ್ಪಳ – 32, ಹಾಸನ – 31, ಬೆಂಗಳೂರು ಗ್ರಾಮಾಂತರ – 31, ಚಿಕ್ಕಮಗಳೂರು – 30, ದಾವಣಗೆರೆ – 25, ಚಿತ್ರದುರ್ಗ – 21, ಹಾವೇರಿ ಮತ್ತು ಕೊಡಗು – 18, ಚಾಮರಾಜನಗರ – 16, ತುಮಕೂರು – 12, ಮಂಡ್ಯ – 11 ಮತ್ತು ರಾಮನಗರ – 04 ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ 2ನೇ ಅಲೆಯಲ್ಲಿ‌ 730 ವೈದ್ಯರ ಸಾವು: ಐಎಂಎ ಮಾಹಿತಿ

newsics.com ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 730 ವೈದ್ಯರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯಯ ಸಂಘ(ಐಎಂಎ)...

ಆರೋಗ್ಯ ಇಲಾಖೆಯ ಕೊರೋ‌ನಾ ಸೋಂಕಿತ, ಸಂಪರ್ಕಿತ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ 10 ದಿನ ವೇತನಸಹಿತ ರಜೆ

newsics.com ಬೆಂಗಳೂರು : ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕೋವಿಡ್ ಸೋಂಕಿತ, ಸಂಪರ್ಕಿತರಿಗೆ 10 ದಿನ ವೇತನಸಹಿತ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರಾದ ಆರುಂಧತಿ ಈ ಆದೇಶ...

ರಾಜ್ಯದಲ್ಲಿ 7,345 ಮಂದಿಗೆ ಕೊರೋನಾ ಸೋಂಕು, 17,913 ಜನ ಗುಣಮುಖ, 148 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಇಂದು (ಜೂ.16) 7,345 ಮಂದಿಗೆ ಸೋಂಕು ತಗುಲಿದ್ದು, 148 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 27,84,355ಕ್ಕೆ ಏರಿದ್ದು ಸಾವಿನ ಸಂಖ್ಯೆ 33,296ಕ್ಕೆ ತಲುಪಿದೆ. ಇಂದು ರಾಜ್ಯದಲ್ಲಿ 17,913 ಮಂದಿ...
- Advertisement -
error: Content is protected !!