newsics.com
ಬೆಂಗಳೂರು: ರಾಜ್ಯದಲ್ಲಿ ಗುರುವಾರ 7710 ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 5,48,557 ಕ್ಕೇರಿದೆ. ಕೊರೋನಾಗೆ ಗುರುವಾರ 65 ಜನರು ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 8331 ಕ್ಕೇರಿದೆ. ರಾಜ್ಯದಲ್ಲಿ ಸದ್ಯ 95459 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಇಂದು 4192 ಕೇಸ್ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 208467 ಕ್ಕೆ ಏರಿಕೆಯಾಗಿದೆ, ಬೆಂಗಳೂರಿನಲ್ಲಿ ಇಂದು 24 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ 2762 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಗೆ 827 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3854 ಜನ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 40285 ಸಕ್ರಿಯ ಪ್ರಕರಣಗಳಿವೆ. ಬಾಗಲಕೋಟೆ 60, ಬಳ್ಳಾರಿ 21, ಬೆಳಗಾವಿ 191, ಬೆಂಗಳೂರು ಗ್ರಾಮಾಂತರ 189, ಬೀದರ್ 71, ಚಾಮರಾಜನಗರ 17, ಚಿಕ್ಕಬಳ್ಳಾಪುರ 45, ಚಿಕ್ಕಮಗಳೂರು 186, ಚಿತ್ರದುರ್ಗ 64, ದಕ್ಷಿಣ ಕನ್ನಡ 266, ದಾವಣಗೆರೆ 131, ಧಾರವಾಡ 264, ಗದಗ 54, ಹಾಸನ 407, ಹಾವೇರಿ 110, ಕಲಬುರಗಿ 85, ಕೊಡಗು 02, ಕೋಲಾರ 31, ಕೊಪ್ಪಳ 56, ಮಂಡ್ಯ 86, ಮೈಸೂರು 481, ರಾಯಚೂರು 52, ರಾಮನಗರ 12, ಶಿವಮೊಗ್ಗ 234, ತುಮಕೂರು 99, ಉಡುಪಿ 74, ಉತ್ತರ ಕನ್ನಡ 109, ವಿಜಯಪುರ 79, ಯಾದಗಿರಿ 42 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಬೆಂಗಳೂರಿನಲ್ಲಿ 4192, ರಾಜ್ಯದಲ್ಲಿ 7710 ಮಂದಿಗೆ ಕೊರೋನಾ, 65 ಜನ ಸಾವು
Follow Us