Thursday, May 26, 2022

ರಾಜ್ಯದಲ್ಲಿ 42,470 ಮಂದಿಗೆ ಕೊರೋನಾ, 35,140 ಸೋಂಕಿತರು ಗುಣಮುಖ, 26 ಜನ ಸಾವು

Follow Us

newsics.com

ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಜ.22) ಹೊಸದಾಗಿ 42,470 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ.

ಶನಿವಾರ 2,19,699 ಜನರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 3,30,447ಕ್ಕೆ ತಲುಪಿದೆ. ಪಾಸಿಟಿವಿಟಿ ದರವು ಶೇ. 19.33ರಷ್ಟು ಇದ್ದು, 35,140 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ 17,266 ಮಂದಿಗೆ ಸೋಂಕು ದೃಢಪಟ್ಟಿದ್ದು, ನಗರದಲ್ಲಿ 2 ಲಕ್ಷದ 18 ಸಾವಿರ ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಶನಿವಾರ 6 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

35140 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 3,30,447 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ ಅತಿ ಹೆಚ್ಚು 2 ಲಕ್ಷದ 18 ಸಾವಿರ ಪ್ರಕರಣಗಳು ಇವೆ.

ಬಾಗಲಕೋಟೆ 42, ಬಳ್ಳಾರಿ 845 , ಬೆಳಗಾವಿ 405 , ಬೆಂಗಳೂರು ಗ್ರಾಮಾಂತರ 958 , ಬೆಂಗಳೂರು ನಗರ 17266 , ಬೀದರ್ 138, ಚಾಮರಾಜನಗರ 397, ಚಿಕ್ಕಬಳ್ಳಾಪುರ 892, ಚಿಕ್ಕಮಗಳೂರು 166, ಚಿತ್ರದುರ್ಗ 622, ದಕ್ಷಿಣಕನ್ನಡ 795, ದಾವಣಗೆರೆ 645, ಧಾರವಾಡ 790, ಗದಗ 306, ಹಾಸನ 2679, ಹಾವೇರಿ 124, ಕಲಬುರಗಿ 665, ಕೊಡಗು 653, ಕೋಲಾರ 1417, ಕೊಪ್ಪಳ 138, ಮಂಡ್ಯ 1822, ಮೈಸೂರು 4601, ರಾಯಚೂರು 236, ರಾಮನಗರ 506, ಶಿವಮೊಗ್ಗ 474, ತುಮಕೂರು 3417, ಉಡುಪಿ 877, ಉತ್ತರ ಕನ್ನಡ 390, ವಿಜಯಪುರ 125, ಯಾದಗಿರಿ 79 ಕೊರೋನಾ‌ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕಿವಿಯಲ್ಲಿ‌ ನೋವು, ಶಿಳ್ಳೆ ಸದ್ದು, ಝುಮ್ ಅನುಭವ- ಒಮೈಕ್ರಾನ್ ಸೋಂಕಿನ ಲಕ್ಷಣ

ಪ್ರಬಲ, ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ ಉಪ ಪ್ರಬೇಧ ಪತ್ತೆ: ಹೆಚ್ಚಿದ ಆತಂಕ

ವದಂತಿ ಬೆನ್ನಲ್ಲೇ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಸುಧಾರಣೆ ಎಂದ ವೈದ್ಯರು

ಸರ್ಜರಿ ಮಾಡುತ್ತಲೇ ಕೊನೆಯುಸಿರೆಳೆದ ಖ್ಯಾತ ನ್ಯೂರೋ ಸರ್ಜನ್

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!