ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 55,079 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ16,38,871ಕ್ಕೆ ಏರಿಕೆಯಾಗಿದೆ. 779 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಒಟ್ಟೂ ಈವರೆಗೆ 33,425
ಬಲಿಯಾಗಿದ್ದಾರೆ.
ಈವರೆಗೆ ಒಟ್ಟು 10,57,806 ಸೋಂಕಿತರು ಗುಣಮುಖರಾಗಿದ್ದಾರೆ. 5,45,318 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 1 ಲಕ್ಷದ 48 ಸಾವಿರದ 454 ಸಕ್ರಿಯ ಕೇಸುಗಳಿದ್ದು 14 ಸಾವಿರದ 729 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 57 ಸಾವಿರದ 962 ಸಕ್ರಿಯ ಕೇಸುಗಳಿದ್ದು 3 ಸಾವಿರದ 838 ಮಂದಿ ಮೃತಪಟ್ಟಿದ್ದಾರೆ.
ಕಚೇರಿಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿಸಿದ ಉದ್ಯಮಿ!
ದೆಹಲಿ ಸರ್ಕಾರ ವಾರದ ಮಾರುಕಟ್ಟೆ ತೆರೆದಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಮತ್ತು ಅಗತ್ಯ ಸುರಕ್ಷತೆ ಕ್ರಮ ತೆಗೆದುಕೊಂಡು ವಾರದ ಮಾರುಕಟ್ಟೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ದೆಹಲಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವಾರದವರೆಗೆ ಪ್ರಾಯೋಗಿಕವಾಗಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಕೊರೋನಾ ಸೋಂಕು ತಗುಲಿದ್ದ ಜಗತ್ತಿನ ಮೊದಲ ನಾಯಿ ಸಾವು!
ದೇಶದಲ್ಲಿ ಗುರುವಾರ ತೆಲಂಗಾಣ ರಾಜ್ಯದಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ದಿನಕ್ಕೆ 21 ಸಾವಿರಕ್ಕೂ ಅಧಿಕ ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ರಾಜ್ಯದಲ್ಲಿ ನಿನ್ನೆ 7 ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಕಂಟೈನ್ ಮೆಂಟ್ ವಲಯಗಳಲ್ಲಿ ಆಗಸ್ಟ್ 31ರವರೆಗೆ ಲಾಕ್ ಡೌನ್ ವಿಸ್ತರಿಸಿದೆ.
ಈ ಮಧ್ಯೆ, ದೇಶದಲ್ಲಿನ ಕೋವಿಡ್-19 ಸ್ಥಿತಿಗತಿ ಬಗ್ಗೆ ಅರಿಯಲು ನಿರ್ಮಾಣ ಭವನದಲ್ಲಿ ಸಚಿವರುಗಳ ಪರಾಮರ್ಶೆ ಸಭೆ ಇಂದು ನಡೆಯಲಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6 ಲಕ್ಷಕ್ಕೂ ಅಧಿಕ ಕೋವಿಡ್-19 ಪರೀಕ್ಷೆ ಮಾಡಿ ಸರ್ಕಾರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
ಕೊರೋನಾ ವಿಚಾರ; ಬಿಲ್ ಗೇಟ್ಸ್- ಎಲಾನ್ ಮಸ್ಕ್ ಮಧ್ಯೆ ಮಾತಿನ ಚಕಮಕಿ
ಕರ್ನಾಟಕದಲ್ಲಿ 24 ಗಂಟೆಯಲ್ಲಿ 6,128 ಕೋವಿಡ್-19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 83 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 69,699 ಸಕ್ರಿಯ ಪ್ರಕರಣಗಳಿದ್ದು, 3,793 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿಯೇ 2,233 ಪ್ರಕರಣಗಳು ದೃಢಪಟ್ಟಿದ್ದರೆ, 26 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 36,522 ಸಕ್ರಿಯ ಪ್ರಕರಣಗಳಿವೆ.
ಆರ್ಥಿಕ ಚಟುವಟಿಕೆ ಸುಧಾರಿಸಲು ಮತ್ತು ಜನತೆಗೆ ಅನುಕೂಲವಾಗಲು ಕರ್ನಾಟಕ ರಾಜ್ಯ ಸರ್ಕಾರ ಆಗಸ್ಟ್ ನಿಂದ ಭಾನುವಾರ ಲಾಕ್ ಡೌನ್ ಮತ್ತು ರಾತ್ರಿ ಕರ್ಫ್ಯೂವನ್ನು ತೆಗೆದುಹಾಕಿದೆ.
ಆ.10ಕ್ಕೆ ಕೋವಿಡ್ ಲಸಿಕೆ; ರಷ್ಯಾ ಘೋಷಣೆ