ನವದೆಹಲಿ: ಸಂಸ್ಕೃತ ಭಾಷೆಯ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಕಳೆದ ಮುರು ವರ್ಷಗಳಲ್ಲಿ 643.84 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
ಆದರೆ ಇತರ ಐದು ಶಾಸ್ತ್ರೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ 29 ಕೋಟಿ ರೂ. ವ್ಯಯಿಸಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ಈ ಮಾಹಿತಿಯನ್ನು ಬಹಿರಂಗಗೊಳಿಸಿವೆ. ತಮಿಳು ಭಾಷೆಗಾಗಿ ಕೇಂದ್ರ ಸರ್ಕಾರ ಮೂರು ವರ್ಷಗಳಲ್ಲಿ 22.94 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೆ, ಇದೇ ಅವಧಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಿಗಾಗಿ ತಲಾ 3.06 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
3 ವರ್ಷದಲ್ಲಿ ಸಂಸ್ಕೃತ ಭಾಷೆ ಉತ್ತೇಜನಕ್ಕೆ 643.84 ಕೋಟಿ ರೂ. ವೆಚ್ಚ!
Follow Us