ಗ್ಯಾಬೋರೊನ್: 70 ಆನೆಗಳನ್ನು ಹತ್ಯೆ ಮಾಡಲು ಆಫ್ರಿಕಾದ ಬೋಟ್ಸ್ವಾನಾ ದೇಶ ಕಾನೂನುಬದ್ಧ ಅವಕಾಶ ನೀಡಿದೆ. ಆನೆಗಳ ಹತ್ಯೆಗೆ ಪರವಾನಗಿ ನೀಡಲು ಹರಾಜು ನಡೆಸಲು ಮುಂದಾಗಿದೆ.
ಜಗತ್ತಿನಲ್ಲೆ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಬೋಟ್ಸ್ವಾನಾದಲ್ಲಿ ಒಂದೂವರೆ ವರ್ಷದ ಬಳಿಕ ಮಾನವ-ವನ್ಯಜೀವಿ ಸಂಘರ್ಷ ಅಂತ್ಯಗೊಳಿಸಲು ಸುಮಾರು 70 ಆನೆಗಳ ಹತ್ಯೆಗೆ ಅಲ್ಲಿನ ಸರ್ಕಾರ ಪರವಾನಗಿ ನೀಡಿದೆ.
ಆಫ್ರಿಕಾದಲ್ಲಿ ಒಟ್ಟಾರೆ ಆನೆಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಆದರೆ ಜಿಂಬಾಬ್ವೆ ಮತ್ತು ಬೋಟ್ಸ್ವಾನಾಗಳಲ್ಲಿ ಆನೆಗಳ ಸಂಖ್ಯೆ ಮಿತಿ ಮೀರಿದೆ. ಬೋಟ್ಸ್ವಾನಾದಲ್ಲಿ 1,30,000ಕ್ಕೂ ಅಧಿಕ ಆನೆಗಳಿವೆ.
70 ಆನೆಗಳ ಹತ್ಯೆಗೆ ಬೋಟ್ಸ್ವಾನಾ ಸರ್ಕಾರ ಸಮ್ಮತಿ
Follow Us