Tuesday, April 13, 2021

ನಮ್ಮ ಮೆಟ್ರೋಗೆ 74 ಕೋಟಿ ನಷ್ಟ, 500 ಕೋಟಿ ಸಾಲಕ್ಕಾಗಿ ಅರ್ಜಿ!

ಬೆಂಗಳೂರು: ಬೆಂಗಳೂರಿಗರ ಆಪ್ತಮಿತ್ರನಂತಿದ್ದ ನಮ್ಮ‌ ಮೆಟ್ರೋ ಕೂಡ ಕೋಟ್ಯಂತರ ರೂಪಾಯಿ ನಷ್ಟ ಎದುರಿಸುತ್ತಿದ್ದು ಇದರಿಂದ BMRCL ಕಂಗಾಲಾಗಿದೆ‌.
ಬೆಂಗಳೂರಿನಲ್ಲಿ ಎರಡು ತಿಂಗಳು ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ನಿರ್ಮಿಸಲಾಗಿತ್ತು. ಇದರಿಂದ ಮೆಟ್ರೋ ನಿಗಮಕ್ಕೆ ಇದುವರೆಗೂ ಬರೋಬ್ಬರಿ 74 ಕೋಟಿ ರೂಪಾಯಿ ನಷ್ಟವಾಗಿದೆ.
ಮಾರ್ಚ್ ನಲ್ಲಿ ಬಿಎಂಆರ್’ಸಿಎಲ್ 40 ಕೋಟಿ ಆದಾಯದ ನಿರೀಕ್ಷೆಯಲ್ಲಿತ್ತಾದರೂ ಲಾಕ್ ಡೌನ್ ನಿಂದ ಕೇವಲ 20 ಕೋಟಿ ರೂಪಾಯಿ ಗಳಿಕೆಯಾಗಿದೆ. ಇದರಿಂದ ಬಿಎಂಆರ್ ಸಿಎಲ್ ಆದಾಯದ ಕೊರತೆ ಎದುರಿಸುತ್ತಿದ್ದು, ವಿವಿಧ ಬ್ಯಾಂಕ್ ಗಳಿಗೆ ಒಟ್ಟು 500 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು BMRCL ಎಂಡಿ ಹೇಳಿದ್ದಾರೆ‌.
ಆದರೆ, ಈ ಲಾಕ್ ಡೌನ್, ಆದಾಯ ಕೊರತೆ ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದ ಉದ್ದೇಶಿತ ಮೆಟ್ರೋ ಕಾಮಗಾರಿಗಳಲ್ಲಿ ಅಂದಾಜು 3 ರಿಂದ 6 ತಿಂಗಳ ವಿಳಂಬವಾಗುವ ನಿರೀಕ್ಷೆ ಇದೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!