Saturday, November 27, 2021

ಇನ್ಮುಂದೆ ಶೇ.75ರಷ್ಟು TCS ನೌಕರರಿಗೆ ಮನೆಯಿಂದಲೇ ಕೆಲಸ!

Follow Us

ನವದೆಹಲಿ: ಇನ್ಮುಂದೆ ಶೇ.75ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ದೇಶದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ ಸೂಚಿಸಿದೆ. ತಕ್ಷಣದಿಂದಲೇ ಈ ನಿಯಮ ಜಾರಿಗೆ ಬರಲಿದೆ.
ಈ ಮೊದಲು ನಾವು ಉದ್ಯೋಗಿಗಳಿಗೆ ಮನೆಯಿಂದ ಸೀಮಿತ ದಿನಗಳವರೆಗೆ ಮಾತ್ರ ಕೆಲಸ ಮಾಡುವ ಆಯ್ಕೆ ನೀಡಿದ್ದೆವು. ಆದರೀಗ ಕೊರೋನಾ ವೈರಸ್ ಸೋಂಕಿನ ಕಾರಣದಿಂದಾಗಿ ಶಾಶ್ವತ ವರ್ಕ್‌ ಫ್ರಮ್ ಹೋಮ್​​​ ಅವಕಾಶ ಉದ್ಯೋಗಿಗಳಿಗೆ ನೀಡಿದ್ದೇವೆ. ಸುಮಾರು 4.5 ಲಕ್ಷ ಉದ್ಯೂಗಿಗಳ ಪೈಕಿ 3.5 ಲಕ್ಷ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಟಿಸಿಎಸ್​ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮೇರೆಗೆ ಹಾಗೂ ಕೊರೋನಾ ವೈರಸ್​​ನಿಂದ ಎದುರಾಗುತ್ತಿರುವ ಸವಾಲುಗಳಿಂದ ಟಿಸಿಎಸ್​​​ ಈ ನಿರ್ಧಾರ ತಾಳಿದೆ ಎನ್ನಲಾಗಿದೆ.
ಕಂಪನಿಯಲ್ಲಿ ಶೇ.100ರಷ್ಟು ಕಾರ್ಯಸಾಧನೆಗೆ 25 ಪರ್ಸೆಂಟ್​ಗಿಂತ ಹೆಚ್ಚು ಉದ್ಯೋಗಿಗಳ ಅಗತ್ಯವಿಲ್ಲ. ಉದ್ಯೋಗಿಗಳು ಕಚೇರಿಯಲ್ಲಿ 25 ಪರ್ಸೆಂಟ್ ಸಮಯ ಕಳೆಯುವುದು ಸಾಕು. ಇವರು ಮನೆಯಿಂದಲೇ ಕೆಲಸ ಮಾಡಿದರೆ ಸಾಕು ಎಂಬುದು ಟಿಸಿಎಸ್​​​ ಉನ್ನತ ಅಧಿಕಾರಿಗಳ ನಿರ್ಧಾರ.
ಮಾರ್ಚ್​ನಿಂದಲೇ ಭಾರತದ ಸುಮಾರು ನಾಲ್ಕು ಮಿಲಿಯನ್ ಐಟಿ ಉದ್ಯೋಗಿಗಳ ಪೈಕಿ ಶೇ.80 ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದು 2025ರ ವೇಳೆಗೆ 25/25 ಮಾದರಿಯನ್ನು ಪಡೆಯಬಹುದು. ಭವಿಷ್ಯದಲ್ಲಿ ನೂರರಷ್ಟು ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡುವುದಿಲ್ಲ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ....

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...
- Advertisement -
error: Content is protected !!