newsics.com
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯಲ್ಲಿ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೀರಾವರಿ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಅಕ್ರಮವೆಸಗಿದ್ದಾರೆ. ದಾಳಿ ವೇಳೆ 4.69 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. 8.6 ಕೋಟಿ ಮೌಲ್ಯದ ಚಿನ್ನ, 20 ಲಕ್ಷದ ಬೆಳ್ಳಿ ಜಪ್ತಿ ಮಾಡಲಾಗಿದೆ. 4 ರಾಜ್ಯಗಳಲ್ಲಿ 47 ಕಡೆ ದಾಳಿ ನಡೆಸಲಾಗಿತ್ತು. 40 ಜನರ ಹೆಸರಿನಲ್ಲಿ ಅಕ್ರಮವಾಗಿ ಉಪಗುತ್ತಿಗೆ ಪಡೆಯಲಾಗಿದ್ದು, 750 ಕೋಟಿ ರೂಪಾಯಿ ಅಕ್ರಮ ನಡೆದಿದೆ. 482 ಕೋಟಿ ರೂಪಾಯಿ ಲೆಕ್ಕವಿಲ್ಲದ ಹಣ ಎಂದು ಕಂಪನಿಗಳು ಒಪ್ಪಿಕೊಂಡಿವೆ. 380 ಕೋಟಿ ರೂಪಾಯಿ ಕಾರ್ಮಿಕ ವೆಚ್ಚವನ್ನು ಕಂಪನಿ ತೋರಿಸಿವೆ. ಮೂವರು ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಲಾಗಿತ್ತು ಎಂದು ಐಟಿ ಇಲಾಖೆ ತಿಳಿಸಿದೆ.
2 ತಲೆ, 3 ಕಣ್ಣಿನ ಕರು ಜನನ: ದುರ್ಗೆಯ ಅವತಾರ ಎಂದು ಪೂಜಿಸುತ್ತಿರುವ ಜನ
ರಾಜ್ಯದಲ್ಲಿ ಹೊಸದಾಗಿ 332 ಕೊರೋನಾ ಪ್ರಕರಣ ಪತ್ತೆ, 515 ಜನ ಗುಣಮುಖ, 11 ಸಾವು
ಕಾರ್ಖಾನೆಯಲ್ಲಿ ರಾಸಾಯನಿಕ ಅನಿಲ ಸೋರಿಕೆ: 34 ಮಂದಿ ಆಸ್ಪತ್ರೆಗೆ ದಾಖಲು