newsics.com
ಮಹಾರಾಷ್ಟ್ರ: ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಕೊರೋನಾ ರುದ್ರ ನರ್ತನ ಮುಂದುವರೆದಿದ್ದು ಒಂದು ದಿನದಲ್ಲೇ 8 ಪೊಲೀಸರು ಕೊರೋನಾಗೆ ಬಲಿಯಾಗಿದ್ದರೇ, ಒಟ್ಟು ೩೭೧ ಪೊಲೀಸರು ಸೋಂಕಿಗೆ ತುತ್ತಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗುತ್ತಿದ್ದು ಇದುವರೆಗೂ ರಾಜ್ಯ ಪೊಲೀಸ್ ಪಡೆಯ ಒಟ್ಟು 19756 ಪೊಲೀಸರು ಕೊವೀಡ್-19 ಪಾಸಿಟಿವ್ ಆಗಿದ್ದರೇ ಇದರಲ್ಲಿ ಒಟ್ಟು 3724 ಸಕ್ರಿಯ ಪ್ರಕರಣಗಳಿವೆ.
ಇದುವರೆಗೂ 15830 ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು 202 ಪೊಲೀಸರು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಜನರು ಕೊರೋನಾಕ್ಕೆ ಭಯಪಡುವುದನ್ನು ಬಿಟ್ಟು ಮುಕ್ತವಾಗಿ ಸಂಚರಿಸಲಾರಂಭಿಸಿದ್ದು ಇದರಿಂದ ರೋಗವಾಹಕಗಳಂತೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಾರಿಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ಮೂವರ ಸಾವು
ನಾನು ಬರ್ತಿದ್ದೀನಿ, ನೀವು ಕೂಡ ಬನ್ನಿ ಎಂದಿದ್ದರಂತೆ ಐಂದ್ರಿತಾ